ವೀಳ್ಯದೆಲೆಯನ್ನು ಸಣ್ಣಗೆ ರುಬ್ಬಿ ಒಂದು ಚಮಚ ಜೇನುತುಪ್ಪ ಬೆರೆಸಿ, ಫೇಸ್ ಪ್ಯಾಕ್ ತಯಾರಿಸಿ. ಇದನ್ನು ಮುಖಕ್ಕೆ ಹಚ್ಚಿ 15 ನಿಮಿಷ ಬಿಟ್ಟು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ. ವಾರದಲ್ಲಿ 2 ಬಾರಿ ಹೀಗೆ ಮಾಡಿದರೆ, ಚರ್ಮ ಮೃದುವಾಗಿ ಕಾಂತಿ ಹೆಚ್ಚುತ್ತದೆ.
ವೀಳ್ಯದೆಲೆಯನ್ನು ಕುದಿಸಿದ ನೀರಿನಿಂದ ಮುಖ ತೊಳೆದರೆ, ಮಖ ಬೆಳ್ಳಗಾಗುತ್ತದೆ. ವಾರಕ್ಕೊಮ್ಮೆ ಪುನಾರಾವರ್ತಿಸಿ.
ಸುಟ್ಟ ಗಾಯಕ್ಕೆ ಇದು ಒಳ್ಳೆಯ ಔಷಧಿ. ವೀಳ್ಯದೆಲೆಯನ್ನು ಸಣ್ಣಗೆ ರುಬ್ಬಿ ಜೇನುತುಪ್ಪ ಬೆರೆಸಿ ಸುಟ್ಟ ಜಾಗಕ್ಕೆ ಹಚ್ಚಿ.