ಹರಿಯಾಣ : ಐಎಎಸ್ ದಿವ್ಯಾ ಮಿತ್ತಲ್ 2013ರ ಬ್ಯಾಚ್ ನ ಐಎಎಸ್ ಅಧಿಕಾರಿ. ಎರಡು ವರ್ಷಗಳ ಐಎಎಸ್ ತರಬೇತಿಯಲ್ಲಿ ಅತ್ಯುತ್ತಮ ಸಾಧನೆಗಾಗಿ ಪ್ರೊಬೇಷನರ್ ಪ್ರೊಬೇಷನರ್ಸ್ ಗೆ ನೀಡುವ ಅಶೋಕ್ ಬಂಬಾವಾಲೆ ಪ್ರಶಸ್ತಿಯನ್ನು ದಿವ್ಯಾ ಅವರಿಗೆ ನೀಡಿ ಗೌರವಿಸಲಾಗಿದೆ. ಅವರ ಸಾಧನೆ ಕಥೆ ಇಲ್ಲಿದೆ.
ಐಎಎಸ್ ದಿವ್ಯಾ ಮಿತ್ತಲ್ ಮೂಲತಃ ಹರಿಯಾಣದ ರೇವಾರಿಯವರು. ಆದರೆ ಹುಟ್ಟಿದ್ದು ದೆಹಲಿಯಲ್ಲಿ. ಶಾಲೆಯಿಂದ ಬಿ.ಟೆಕ್ ವರೆಗೆ ಓದಿದ್ದು ದೆಹಲಿಯಲ್ಲಿ.
ದಿವ್ಯಾ ಮಿತ್ತಲ್ ಗೆ ಐಎಎಸ್ ಅಧಿಕಾರಿಯಾಗಲು ಸ್ಪೂರ್ತಿ ಬೇರೆ ಯಾರೂ ಅಲ್ಲ ಅವರ ಪತಿ ಗಗನ್ ದೀಪ್ ಸಿಂಗ್. ಐಎಎಸ್ ದಿವ್ಯಾ ಮಿತ್ತಲ್ ಅವರ ಪತಿ ಗಗನ್ ದೀಪ್ ಸಿಂಗ್ ಕೂಡ ಇಂಜಿನಿಯರಿಂಗ್ ವಿದ್ಯಾರ್ಥಿ.
ಮದುವೆಯ ನಂತರ ಇಬ್ಬರೂ ಲಂಡನ್ ನಲ್ಲಿ ಒಟ್ಟಿಗೆ ಕೆಲಸಕ್ಕೆ ಸೇರಿಕೊಂಡರು. ದೆಹಲಿಯ ಐಐಟಿಯಲ್ಲಿ ಬಿಟೆಕ್ ಮಾಡಿದ್ದಾರೆ. ಇದಾದ ಬಳಿಕ ಬೆಂಗಳೂರಿನ ಐಐಎಂನಲ್ಲಿ ಎಂಬಿಎ ಮಾಡಿದರು.
ವಿದೇಶದಲ್ಲಿನ ಕೆಲಸದಲ್ಲಿ ಸಾಕಷ್ಟು ಹಣವಿತ್ತು. ಇಬ್ಬರೂ ಕೆಲಸ ಬಿಟ್ಟು ಭಾರತಕ್ಕೆ ಬಂದು UPSC ಸಿವಿಲ್ ಸರ್ವೀಸಸ್ ಪರೀಕ್ಷೆಗೆ ತಯಾರಿ ಆರಂಭಿಸಿದರು. ದಂಪತಿಗಳು ಭಾರತಕ್ಕೆ ಬಂದು ಯಾವುದೇ ಐಎಎಸ್ ಕೋಚಿಂಗ್ ಸೇರದೆ ಸ್ವಯಂ ಅಧ್ಯಯನವನ್ನು ಪ್ರಾರಂಭಿಸಿದರು.
2012ರಲ್ಲಿ ದಿವ್ಯಾ ಮಿತ್ತಲ್ ಕೂಡ ಆಯ್ಕೆಯಾಗಿ ಐಪಿಎಸ್ ಆದರು. ಅವರು ಗುಜರಾತ್ ಕೇಡರ್ ಪಡೆದರು. ತರಬೇತಿ ನಡೆಯುತ್ತಿರುವಾಗಲೇ 2013ರಲ್ಲಿ ಐಎಎಸ್ ಆದರು.
ದಿವ್ಯಾ ಮಿತ್ತಲ್ ಮೊದಲ ಪ್ರಯತ್ನದಲ್ಲಿಯೇ UPSC ತೇರ್ಗಡೆಯಾಗಿದ್ದಾರೆ. ಇನ್ನು ಐಎಎಸ್ ದಿವ್ಯಾ ಮಿತ್ತಲ್ ಅವರು ಮಿರ್ಜಾಪುರದ ಡಿಎಂ ಆಗುವ ಮೊದಲು ಬರೇಲಿ ಅಭಿವೃದ್ಧಿ ಪ್ರಾಧಿಕಾರದ ವಿಸಿ, ಯುಪಿಎಸ್ ಐಡಿಎ, ಸಿಒ ಗೊಂಡಾ, ಎಸ್ ಡಿಎಂ ಮೀರತ್ ಮತ್ತು ಸೀತಾಪುರ್ ನ ಜಂಟಿ ಎಂಡಿ ಹುದ್ದೆಗಳಲ್ಲಿಯೂ ಕಾರ್ಯನಿರ್ವಹಿಸಿದ್ದಾರೆ.