ಬೆಂಗಳೂರು: ಸಂಪುಟ ವಿಸ್ತರಣೆ ಆಗುತ್ತದೆ ನಮಗೆ ಸಚಿವ ಸಂಪುಟ ಸೇರಲು ಅವಕಾಶ ಸಿಗುತ್ತದೆ ಎಂದು ಕೊಂಡವರಿಗೆ ನಿರಾಶೆ ಆಗಿದೆಯಂತೆ ಏಕೆಂದರೆ ರಾಜ್ಯ ಸಚಿವ ಸಂಪುಟ ಸದ್ಯಕ್ಕೆ ವಿಸ್ತರಣೆ ಇಲ್ಲ.!
ರಾಜ್ಯ ಸಚಿವ ಸಂಪುಟ ಪುನಾರಚನೆ ಬದಲು ಖಾಲಿ ಇರುವ ಸ್ಥಾನಗಳನ್ನು ಭರ್ತಿ ಮಾಡುವಂತೆ ಕಾಂಗ್ರೆಸ್ ಹೈಕಮಾಂಡ್, ರಾಜ್ಯ ನಾಯಕರಿಗೆ ಸೂಚನೆ ನೀಡಲಾಗಿದೆಯಂತೆ.!
ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೈಕಮಾಂಡ್ ನಾಯಕರ ಜೊತೆ ಸಭೆ ನಡೆಸಿದ್ದು, ಸಭೆಯಲ್ಲಿ ಸಂಪುಟ ಪುನಾರಚನೆಗೆ ಹೈಕಮಾಂಡ್ ನಾಯಕರು ಒಪ್ಪಿಲ್ಲ ಎನ್ನಲಾಗಿದೆ. ಸದ್ಯಕ್ಕೆ ಸಂಪುಟ ಪುನಾರಚನೆ ಬೇಡ. ಆದರೆ ಖಾಲಿ ಇರುವ ಸ್ಥಾನಗಳನ್ನು ಭರ್ತಿ ಮಡಲು ಹೈಕಾಂಡ್ ಒಪ್ಪಿಗೆ ಸೂಚಿಸಿದೆಯಂತೆ