Central Bank of India Recruitment 2024 : ಸೆಂಟ್ರಲ್ ಬ್ಯಾಂಕ್ ಆಫ್​​ ಇಂಡಿಯಾದಲ್ಲಿ ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳ ನೇಮಕಾತಿ ಆರಂಭ, ಇಲ್ಲಿದೆ ಮಾಹಿತಿ

WhatsApp
Telegram
Facebook
Twitter
LinkedIn

ನೀವು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಮಾಡಲು ಆಸಕ್ತಿ ಹೊಂದಿದ್ದು ಈಗಾಗಲೇ ಹುಡುಕಾಟ ನಡೆಸುತ್ತಿದ್ದರೆ, ಅಂತಹ ಅಭ್ಯರ್ಥಿಗಳಿಗೆ ಇಲ್ಲೊಂದು ಸುವರ್ಣವಕಾಶವಿದೆ. ಇದೀಗ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಿಂದ ವಿಶೇಷ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದ್ದು, 253 ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿದೆ. ಮುಂದಿನ ತಿಂಗಳು ಡಿಸೆಂಬರ್ 3 ರೊಳಗೆ ಅಧಿಕೃತ ವೆಬ್ಸೈಟ್ ಗೆ ಭೇಟಿ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಹುದ್ದೆಗಳ ಸಂಪೂರ್ಣ ವಿವರ:
ಚೀಫ್ ಮ್ಯಾನೇಜರ್ – 10
ಸೀನಿಯರ್ ಮ್ಯಾನೇಜರ್ – 56
ಮ್ಯಾನೇಜರ್ – 162
ಅಸಿಸ್ಟಂಟ್ ಮ್ಯಾನೇಜರ್ – 25
ಒಟ್ಟು ಹುದ್ದೆಗಳ ಸಂಖ್ಯೆ – 253 ಹುದ್ದೆಗಳು
ಉದ್ಯೋಗ ಸ್ಥಳ : ಭಾರತದೆಲ್ಲೆಡೆ

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಇರಬೇಕಾದ ಶೈಕ್ಷಣಿಕ ಅರ್ಹತೆ:
ಅಭ್ಯರ್ಥಿಗಳು ಹುದ್ದೆಗಳಿಗೆ ಅನುಗುಣವಾಗಿ ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ ಬಿಇ/ ಬಿ.ಟೆಕ್/ ಎಂಸಿಎ/ ಪದವಿ / ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿರಬೇಕು.

ಅರ್ಹ ಅಭ್ಯರ್ಥಿಗಳಿರಬೇಕಾದ ವಯೋಮಿತಿ:
ಚೀಫ್ ಮ್ಯಾನೇಜರ್ ಹುದ್ದೆಗೆ ಕನಿಷ್ಠ 34 ವರ್ಷ, ಗರಿಷ್ಠ 40 ವರ್ಷ ಹಾಗೂ ಸೀನಿಯರ್ ಮ್ಯಾನೇಜರ್ ಹುದ್ದೆಗೆ ಕನಿಷ್ಠ 30 ವರ್ಷ, ಗರಿಷ್ಠ 38 ವರ್ಷ ವಯಸ್ಸು ಮೀರಿರಬಾರದು.
ಇನ್ನುಳಿದಂತೆ ಮ್ಯಾನೇಜರ್ ಹುದ್ದೆಗೆ ಕನಿಷ್ಠ 27 ವರ್ಷ, ಗರಿಷ್ಠ 33 ವರ್ಷ ಹಾಗೂ ಅಸಿಸ್ಟಂಟ್ ಮ್ಯಾನೇಜರ್ ಹುದ್ದೆಗೆ ಕನಿಷ್ಠ 23 ವರ್ಷ, ಗರಿಷ್ಠ 27 ವರ್ಷ ವಯಸ್ಸು ಮೀರಿರಬಾರದು.

ಅದಲ್ಲದೇ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಹಾಗೂ ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.

ಆಯ್ಕೆ ಪ್ರಕ್ರಿಯೆ:
ಆನ್ಲೈನ್ ಪ್ಲಾಟ್ ಫಾರ್ಮ್ ಪರೀಕ್ಷೆ, ಸನ್ನಿವೇಶ ಆಧಾರಿತ ಪರೀಕ್ಷೆ ಹಾಗೂ ವೈಯುಕ್ತಿಕ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಮೇಲ್ಕಂಡ ಹುದ್ದೆಗಳ ವೇತನ ಶ್ರೇಣಿ:
ಚೀಫ್ ಮ್ಯಾನೇಜರ್ – ರೂ 102300-120940
ಸೀನಿಯರ್ ಮ್ಯಾನೇಜರ್- ರೂ 85920-105280
ಮ್ಯಾನೇಜರ್ – ರೂ 64820-93960
ಅಸಿಸ್ಟಂಟ್ ಮ್ಯಾನೇಜರ್- ರೂ 48480-85920

 

ಅರ್ಜಿ ಶುಲ್ಕ:
ಪ.ಜಾತಿ/ ಪ.ಪಂ./ ಪಿಡಬ್ಲ್ಯೂಡಿ/ ಮಹಿಳಾ ಅಭ್ಯರ್ಥಿಗಳು – ರೂ. 175
ಉಳಿದ ಅಭ್ಯರ್ಥಿಗಳು – ರೂ. 850
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : ನವೆಂಬರ್ 18, 2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಡಿಸೆಂಬರ್ 03, 2024
ಆನ್‌ಲೈನ್‌ ಪರೀಕ್ಷೆ ನಡೆಯುವ ದಿನಾಂಕ : ಡಿಸೆಂಬರ್ 14, 2024
ಸಂದರ್ಶನ ನಡೆಯುವ (ತಾತ್ಕಾಲಿಕ) ದಿನಾಂಕ : ಜನವರಿ 2ನೇ ವಾರ, 2025

BC Suddi   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon