ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಫಲಿತಾಂಶದ ನಂತರ, ಉದ್ಧವ್ ನೇತೃತ್ವದ ಶಿವಸೇನೆಯಲ್ಲಿ ಮಹಾವಿಕಾಸ್ ಅಘಾಡಿಯಿಂದ ಪ್ರತ್ಯೇಕತೆಯ ಧ್ವನಿಗಳು ಬರಲು ಪ್ರಾರಂಭಿಸಿವೆ. ಈಗ ಉದ್ಧವ್ ಠಾಕ್ರೆ ಅವರು ಶರದ್ ಪವಾರ್ ಮತ್ತು ರಾಹುಲ್ ಗಾಂಧಿ ಬಗ್ಗೆ ಭ್ರಮನಿರಸನಗೊಂಡಿದ್ದಾರೆಯೇ? ಬಾಳಾಸಾಹೇಬ್ ಠಾಕ್ರೆ ಪುತ್ರ ಉದ್ಧವ್ ಠಾಕ್ರೆಗೆ ತನ್ನ ತಪ್ಪಿನ ಅರಿವಾಗುತ್ತಿದೆಯೇ? ಅವರು ನಿಜವಾಗಿಯೂ ಮಹಾವಿಕಾಸ್ ಅಘಾಡಿಯನ್ನು ಬಿಡುತ್ತಾರಾ ಎಂಬ ಪ್ರಶ್ನೆಗಳು ಮೂಡುತ್ತಿವೆ.
ವಿಧಾನಸಭಾ ಚುನಾವಣೆಯ ನಂತರ ಉದ್ಧವ್ ಠಾಕ್ರೆಯ ಅವರ ಬಣದ ಸದಸ್ಯರು ಮಹಾವಿಕಾಸ್ ಅಘಾಡಿಯನ್ನು ತೊರೆಯುವಂತೆ ಕೇಳಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಆದರೆ ಶಿವಸೇನಾ ಯುಬಿಟಿಯು ಬಣದ ಪ್ರಮುಖ ನಾಯಕ ಸಂಜಯ್ ರಾವತ್ ಅವರು ಮಹಾ ವಿಕಾಸ್ ಅಘಾಡಿ ಮಿತ್ರಪಕ್ಷಗಳ ನಡುವೆ ಯಾವುದೇ ಆಂತರಿಕ ಗಲಾಟೆಯ ವರದಿಗಳನ್ನು ಸಾರಾಸಗಟಾಗಿ ಅಲ್ಲಗಳೆದಿದ್ದು, ಅವರು 2019 ರಲ್ಲಿ ಮೈತ್ರಿಕೂಟದ ಭಾಗವಾದ ಸಂಬಂಧದಿಂದ ಹೊರಬರುವುದಿಲ್ಲ ಎಂದು ಹೇಳಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶಿವಸೇನಾ ಉದ್ಧವ್ ಠಾಕ್ರೆ ಬಣವು ಕೇವಲ 20 ಸ್ಥಾನಗಳನ್ನು ಗಳಿಸಿತು, ಅದರ ಮಿತ್ರಪಕ್ಷಗಳಲ್ಲಿ ಇದು ಅತಿ ಹೆಚ್ಚಾಗಿತ್ತು. ಇನ್ನೊಂದೆಡೆ ಚುನಾವಣೆಯಲ್ಲಿ ಕಾಂಗ್ರೆಸ್ 16 ಸ್ಥಾನಗಳನ್ನು ಗೆದ್ದರೆ, ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಯು 10 ಸ್ಥಾನಗಳನ್ನು ಗೆದ್ದಿವೆ. ವಾಸ್ತವವಾಗಿ, ಮಹಾರಾಷ್ಟ್ರ ಚುನಾವಣೆಯ ಹೀನಾಯ ಸೋಲಿನ ನಂತರ, ಈಗ ಉದ್ಧವ್ ಠಾಕ್ರೆ ಮಹಾವಿಕಾಸ್ ಅಘಾಡಿಯಿಂದ ಬೇರ್ಪಡಬೇಕು ಎಂದು ಶಿವಸೇನೆಯಲ್ಲಿ ಧ್ವನಿ ಎತ್ತಲು ಪ್ರಾರಂಭಿಸಿದೆ. ಆದರೆ, ಉದ್ಧವ್ ಸೇನೆಯು ಮಹಾವಿಕಾಸ್ ಅಘಾಡಿ ಯಿಂದ ಬೇರ್ಪಡುವ ಯೋಜನೆಗಳ ವರದಿಗಳನ್ನು ತಳ್ಳಿಹಾಕಿದೆ, ಸಮೀಕ್ಷೆಯಲ್ಲಿ “ಯಾವುದೇ ಸತ್ಯ” ಇಲ್ಲ ಎಂದು ಹೇಳಿದೆ.
“ವಿವಿಧ ವಲಯಗಳಿಂದ ಬರುತ್ತಿರುವ ಕಾಮೆಂಟ್‌ಗಳು ಪಕ್ಷದ ವರಿಷ್ಠರ ಸ್ಥಾನವನ್ನು ಪ್ರತಿಬಿಂಬಿಸುವುದಿಲ್ಲ. ಪ್ರಸ್ತುತ ಎಲ್ಲಾ ವರದಿಗಳು ಊಹಾತ್ಮಕ” ಎಂದು ಪಕ್ಷ ಹೇಳಿದೆ. ಬೃಹತ್ ಮುಂಬೈ ನಗರ ಪಾಲಿಕೆಯ ಚುನಾವಣೆಯಲ್ಲಿ ಉದ್ಧವ್ ಠಾಕ್ರೆ ಬಣವು ಏಕಾಂಗಿಯಾಗಿ ಹೋಗುತ್ತದೆಯೇ ಅಥವಾ ಮಹಾವಿಕಾಸ್ ಅಘಾಡಿಯ ಭಾಗವಾಗಿ ಉಳಿಯುತ್ತದೆಯೇ ಎಂಬ ಮಾಧ್ಯಮದ ಪ್ರಶ್ನೆಗಳಿಗೆ ಶಿವಸೇನಾ ಉದ್ಧವ್ ಠಾಕ್ರೆ ಬಣ ಸಂಸದ ಸಂಜಯ್ ರಾವುತ್ ಪ್ರತಿಕ್ರಿಯಿಸಿ, ಯಾವುದೇ ಕಾರಣಕ್ಕೂ ಮಹಾವಿಕಾಸ್ ಅಘಾಡಿಯನ್ನು ತೊರುವುದಿಲ್ಲ ಎಂದಿದ್ದಾರೆ. ಮೂಲಗಳನ್ನು ಪ್ರಕಾರ, ಮಹಾರಾಷ್ಟ್ರ ಚುನಾವಣೆಯಲ್ಲಿ ಶಿವಸೇನೆಯ ಕಳಪೆ ಪ್ರದರ್ಶನದ ದೃಷ್ಟಿಯಿಂದ, ನಾಯಕರು ಉದ್ಧವ್ ಠಾಕ್ರೆ ಅವರನ್ನು ಬೃಹತ್ ಮುಂಬೈ ನಗರ ಪಾಲಿಕೆಯ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವಂತೆ ವಿನಂತಿಸಿದ್ದಾರೆ. ಜೊತೆಗೆ ಮತ್ತೊಮ್ಮೆ ಬಿಜೆಪಿಯೊಂದಿಗೆ ಸೇರುವಂತೆಯು ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಪಕ್ಷದ ನಾಯಕರ ಈ ಬೇಡಿಕೆಯ ಬಗ್ಗೆ ಉದ್ಧವ್ ಠಾಕ್ರೆ ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳಬಹುದು ಎನ್ನಲಾಗಿದೆ.