ಚಿತ್ರದುರ್ಗ: ಸಾವಂತನಹಟ್ಟಿ, ಸಿಹಿ ನೀರು ಹೊಂಡದ ಹತ್ತಿರ, ಚಿತ್ರದುರ್ಗದ ಶ್ರೀ ಬನಶಂಕರಿ ದೇವಸ್ಥಾನದಲ್ಲಿ ಶುಕ್ರವಾರ ಕಾರ್ತಿಕ ಮಾಸದ ಪ್ರಯುಕ್ತ ಶ್ರೀ ಬನಶಂಕರಿ ಅಮ್ಮನವರಿಗೆ ದೇವಸ್ಥಾನದಲ್ಲಿ ಸಂಜೆ ಪಂಚಾಮೃತಅಭಿಷೇಕ ವಿಶೇಷ ಅಲಂಕಾರ , ಮಹಾಮಂಗಳಾರತಿ , ತೀರ್ಥ ಪ್ರಸಾದ ನೆರವೇರಿತು.
ಈ ಕಾರ್ಯಕ್ರಮದಲ್ಲಿ ಮಾಜಿ ನಗರಸಭಾಧ್ಯಕ್ಷರಾದಶ್ರೀ ಹೆಚ್.ಮಂಜಪ್ಪ, ಬನಶಂಕರಿ ಸೇವಾ ಸಮಿತಿಯ ಅಧ್ಯಕ್ಷರಾದ ಬಿ.ಎಸ್.ಕೃಷ್ಣಪ್ಪ, ಕಾರ್ಯದರ್ಶಿಯಾದ, ಬಿ.ಎಸ್.ಶಂಕರ್, ನಿರ್ದೇಶಕರುಗಳಾದ ಸೋಮಶೇಖರಪ್ಪ, ಪುಟ್ಟಪ್ಪ, ಟಿ.ಎನ್. ಕಾಂತರಾಜ್, ವಿ.ಶ್ರೀನಿವಾಸ್, ಶ್ರೀಮತಿರತ್ನಮ್ಮ, ಬದರಿ ಟಿ.ಎನ್.ಶ್ರೀನಿವಾಸ್, ಮಾರುತಿ, ಮಂಜುನಾಥಗೌಡ, ಶ್ರೀಮತಿ ಪದ್ಮ, ಶ್ರೀಮತಿ ನಿರ್ಮಲಮ್ಮ, ಮನೋಜ್ ಹಾಗೂ ಪ್ರಜ್ವಲ್ ಮತ್ತು ಸಾವಂತನಹಟ್ಟಿಯ ಸಕಲ ಭಕ್ತಾಧಿಗಳು ಹಾಜರಿದ್ದರು.