ಹಾವೇರಿ : ಹಾವೇರಿ ತಾಲೂಕಿನ ಕಳ್ಳಿಹಾಳ ಗ್ರಾಮದ ರೈತ ಮಂಜುನಾಥ್ ಕಡ್ಲಿ ಅವರು ಜಮೀನಿನ ವಾಟ್ನಿ ಮಾಡಿಸಲು ಅರ್ಜಿ ಸಲ್ಲಿಸಿದ್ದರು. ಅದಕ್ಕೆ ಬೇಕಾದ ಜಮೀನಿನ ನಕಾಶೆ ನೀಡಲು ಅವರು ಕೋರಿದ್ದರು. ಆದರೆ ಭೂಮಾಪಕ ಅಶೋಕ್ 30 ಸಾವಿರ ಲಂಚ ಕೇಳಿದ್ದರು. ಕೊನೆಗೂ 25 ಸಾವಿರಕ್ಕೆ ಓಕೆ ಆಗಿತ್ತು. ಈ ಘಟನೆ ನಡೆದಿರುವುದು ಹಾವೇರಿಯಲ್ಲಿ.
ಈ ಸಂಬಂಧ ಮಂಜುನಾಥ್ ಲೋಕಾಯುಕ್ತ ಕಚೇರಿಗೆ ದೂರು ಸಲ್ಲಿಸಿದ್ದರು. ಅಶೋಕ್ ಮುಂಗಡವಾಗಿ 15 ಸಾವಿರ ಲಂಚ ಪಡೆಯುವ ವೇಳೆ ಲೋಕಾಯುಕ್ತ ಅಧಿಕಾರಿಗಳ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಹಾಕಿಕೊಂಡಿದ್ದಾರೆ.