ಬಹಳಷ್ಟು ಜನರು ಸಾಮಾನ್ಯವಾಗಿ ಊಟದ ಬಳಿಕ ಎಲೆ ಅಡಿಕೆ ತಿನ್ನಲು ಇಷ್ಟಪಡುತ್ತಾರೆ. ಯಾಕೆಂದರೆ ಇದು ಆಹಾರವನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆಯಂತೆ.
ಕೂದಲಿಗೂ ಸಹ ವೀಳ್ಯದೆಲೆ ನೀರು ಬಹಳಷ್ಟು ಉಪಯೋಗಕಾರಿಯಾಗಿದೆ. ಈ ನೀರು ಬಿಳಿ ಕೂದಲನ್ನು ಕಪ್ಪಾಗಿಸುತ್ತದೆ
ರಾತ್ರಿ ಮಲಗುವ ಮುಂಚೆ ನೀರಿನಲ್ಲಿ ವೀಳ್ಯದೆಲೆಯನ್ನು ನೆನೆಸಿಡಬೇಕು. ಬೆಳಗ್ಗೆ ಕುದಿಸಿ ಕುಡಿದರೆ ಉತ್ತಮ ರಿಸಲ್ಟ್ ಸಿಗುತ್ತದೆ. ಇದರಿಂದ ಬಿಳಿ ಕೂದಲು ಕ್ರಮೇಣವಾಗಿ ಕಪ್ಪಾಗುತ್ತವೆ ಎನ್ನಲಾಗಿದೆ. ಅಲ್ಲದೇ ಕೂದಲು ಉದುರುವಿಕೆ ಕಡಿಮೆಯಾಗಿ, ದಪ್ಪವಾಗಿ, ಉದ್ದವಾಗಿ (hair fall, thicker, longer) ಕೂದಲು ಬೆಳೆಯುತ್ತವೆ.
ವೀಳ್ಯದೆಲೆಯ ನೀರು ಮಾಡುವ ವಿಧಾನ : 3-4 ವೀಳ್ಯದೆಲೆಗಳನ್ನು ತೊಳೆದು ಮೂರು ಲೋಟ ನೀರಿನಲ್ಲಿ ಚೆನ್ನಾಗಿ ಕುದಿಸಬೇಕು. ಇದು ತಣ್ಣಗಾದ ನಂತರ ದಿನಕ್ಕೆ ಎರಡರಿಂದ ಮೂರು ಸಲ ಕುಡಿಯಬೇಕು.