ನವದೆಹಲಿ : ಪ್ರಧಾನಿ ಮೋದಿ ಹಾಗೂ ಇತರ ಬಿಜೆಪಿ ನಾಯಕರೊಂದಿಗೆ ‘ದ ಸಾಬರಮತಿ ರಿಪೋರ್ಟ್’ ಸಿನಿಮಾ ವೀಕ್ಷಿಸಿದ ಕ್ಷಣವನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಈ ಚಿತ್ರವು ಗೋದ್ರಾ ರೈಲು ದುರಂತದ ದಾರುಣ ಕಥಾನಕವನ್ನು ಬಯಲು ಮಾಡಿದೆ ಎಂದು ಪ್ರಹ್ಲಾದ್ ಜೋಶಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. 2002ರಲ್ಲಿ ಗುಜರಾತಿನ ಗೋಧ್ರಾದಲ್ಲಿ ನಡೆದ ಗಲಭೆಯ ಕುರಿತಾದ ನೈಜ ಅಂಶಗಳನ್ನು ಆಧರಿಸಿದ ‘ಸಾಬರಮತಿ ರಿಪೋರ್ಟ್’ ಸಿನಿಮಾವನ್ನು ಪ್ರಧಾನಿ ಮೋದಿ ಸೇರಿದಂತೆ ಅನೇಕ ಎನ್‌ಡಿಎ ನಾಯಕರು ವೀಕ್ಷಿಸಿದ್ದಾರೆ.
ಬಾಲಯೋಗಿ ಸಭಾಂಗಣದಲ್ಲಿ ಆಯೋಜಿಸಿದ್ದ ಚಿತ್ರದ ವಿಶೇಷ ಪ್ರದರ್ಶನದಲ್ಲಿ ಕೇಂದ್ರ ಸಚಿವರಾದ ರಾಜನಾಥ ಸಿಂಗ್, ಅಮಿತ್ ಶಾ, ಜೆ.ಪಿ. ನಡ್ಡಾ, ಸಂಸದೀಯ ಖಾತೆ ಪ್ರಹ್ಲಾದ್ ಜೋಶಿ ಸೇರಿದಂತೆ ಕೇಂದ್ರ ಸಚಿವರು, ಸಂಸದರು ಮೋದಿಗೆ ಸಾಥ್ ನೀಡಿದರು.