ಡ್ರೆಸ್, ಚಿನ್ನಾಭರಣ, ಕಾರು, ಬೈಕ್, ಮನೆ, ಮನೆಯೊಳಗಿನ ವಸ್ತುಗಳು ಕೂಡ ಬಾಡಿಗೆಗೆ ಸಿಗುತ್ತೆ. ಇಲ್ಲಿ ಬಾಡಿಗೆಗೆ ಬಾಯ್‌ಫ್ರೆಂಡ್ ಕೂಡ ಸಿಗ್ತಾರೆ. ಬಾಯ್‌ಫ್ರೆಂಡ್ ಟ್ರೆಂಡ್ ವಿಯೆಟ್ನಾಂನಲ್ಲಿ ಹೆಚ್ಚಾಗಿದೆ.
ಈ ಬಾಡಿಗೆ ಬಾಯ್‌ಫ್ರೆಂಡ್ ಪಡೆಯಲು ಯುವತಿಯರು ಕ್ಯೂ ನಿಲ್ಲುತ್ತಾರೆ. ತಮಗೆ ಎಷ್ಟು ದಿನ ಬೇಕೋ ಎಷ್ಟು ದಿನ ಬಾಡಿಗೆ ಬಾಯ್‌ಫ್ರೆಂಡ್ ಜೊತೆ ಇರುತ್ತಾರೆ. ಬಾಡಿಗೆ ಅವಧಿ ಮುಗಿಯುತ್ತಿದ್ದಂತೆ ಬೇರೆ ಬೇರೆಯಾಗುತ್ತಾರೆ. ಈ ಬಾಡಿಗೆ ಬಾಯ್‌ಫ್ರೆಂಡ್ ಟ್ರೆಂಡ್ ವಿಯೆಟ್ನಾಂನಲ್ಲಿ ಹೆಚ್ಚಾಗಿದೆ. ಇಲ್ಲೀ ಹೆಣ್ಣುಮಕ್ಕಳು ವಿದ್ಯಾಭ್ಯಾಸ, ವೃತ್ತಿ, ಉದ್ಯಮ ಹೀಗೆ ಮುಂದುವರಿಯುತ್ತಿದ್ದಾರೆ. ಇದರ ನಡುವೆ ಸಮಯಕ್ಕೆ ತಕ್ಕ ಹಾಗೆ ಮದುವೆಯಾಗಿ ಸಂಸಾರ ನಡೆಸುವುದು ವಿಯೆಟ್ನಾಂ ಯುವತಿಯರಿಗೆ ಕಷ್ಟವಾಗುತ್ತಿದೆ. ಮದುವೆಯಾದ ಬಳಿಕ ಸಂಸಾರದ ಜವಾಬ್ದಾರಿ, ವೃತ್ತಿ, ಪೋಷಕರು, ಪತಿಯ ಕುಟುಂಬಸ್ಥರು ಹೀಗೆ ಹೊಂದಿಕೊಂಡು ಹೋಗುವುದು ಕಷ್ಟವಾಗುತ್ತಿದೆ.
ಹಾಗಂತ ಮದುವೆ ಮುಂದೂಡಿದರೆ ಪೋಷಕರ ಒತ್ತಡ ಹೆಚ್ಚಾಗುತ್ತಿದೆ. ವೃತ್ತಿ ನಡುವೆ ಡೇಟಿಂಗ್ ಸಮಯ ಸಿಗುತ್ತಿಲ್ಲ. ಪರ್ಮನೆಂಟ್ ಮದುವೆಯಾದರೆ ಬಳಿಕ ವೃತ್ತಿ ಮುಂದುವರಿಸಲು ಸಾಧ್ಯವಾಗುತ್ತಿಲ್ಲ. ಗಂಡ, ಮಕ್ಕಳು ಹೀಗೆ ನಾಲ್ಕು ಗೋಡೆಗಳ ನಡುವೆ ಉಳಿದು ಬಿಡುತ್ತೇವೆ ಅನ್ನೋ ಭಯ ಹೆಚ್ಚಾಗುತ್ತಿದೆ. ಜೊತೆಗೆ ಮದುವೆ ಬಳಿಕ ಸಂಸಾರದಲ್ಲಿ ಎದರಾಗುತ್ತಿರುವ ಸಮಸ್ಯೆಗಳು ಹೆಚ್ಚಾಗುತ್ತಿದೆ. ಈ ಎಲ್ಲಾ ಸಮಸ್ಯೆಗಳಿಗೆ ವಿಯೆಟ್ನಾಂ ಯುವತಿಯರು ಬಾಡಿಗೆ ಬಾಯ್‌ಫ್ರೆಂಡ್ ಪರಿಹಾರ ಕಂಡುಕೊಂಡಿದ್ದಾರೆ.
ಬಹುತೇಕ ಯುವತಿರ ಮೊದಲ ಆಯ್ಕೆ ಇದೀಗ ಬಾಡಿಗೆ ಬಾಯ್‌ಫ್ರೆಂಡ್. ಎಲ್ಲವನ್ನೂ ನಿಭಾಯಿಸಲು ಅನಿವಾರ್ಯಗಿದೆ ಎಂದಿದ್ದಾರೆ. ಈ ಟ್ರೆಂಡ್‌ನಿಂದ ನಮ್ಮ ವೃತ್ತಿ ಮುಂದುವರಿಸಲು, ಪೋಷಕರು, ಮನೆ ನಿಭಾಯಿಸಲು ಸಾಧ್ಯವಾಗುತ್ತಿದೆ. ಆದರೆ ಮದುವೆಯಾದರೆ ಇದು ಸಾಧ್ಯವಾಗುದಿಲ್ಲ ಎಂದು ಈ ಆಯ್ಕೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.