ನೀವು ಬಿಗಿಯಾದ ಬಟ್ಟೆಗಳನ್ನು ಧರಿಸಿದರೆ ಉಸಿರಾಡಲು ಕಷ್ಟವಾಗುತ್ತದೆ. ಮುಖ್ಯವಾಗಿ ದೇಹದ ಮೇಲ್ಬಾಗದಲ್ಲಿ ಬಿಗಿ ಬಟ್ಟೆಗಳನ್ನು ಧರಿಸಿದಾಗ ಎದೆ ಮೇಲೆ ಒತ್ತಡ ಹೆಚ್ಚಾಗುತ್ತದೆ.
ಎದೆ ಭಾಗ ಮುಕ್ತವಾಗಿ ಇಲ್ಲದಿದ್ದರೆ ಹೃದಯ ಮತ್ತು ಶ್ವಾಸಕೋಶ ಸಂಬಂಧಿ ಸಮಸ್ಯೆಗಳಲ್ಲದೆ ಎದೆನೋವು ಕಾಣಿಸಿಕೊಳ್ಳುತ್ತದೆ. ಅಲ್ಲದೆ ಮೆದುಳಿಗೆ ಸರಿಯಾಗಿ ರಕ್ತ ಸಂಚಾರವಾಗದೆ ಏಕಾಗ್ರತೆ ಸಾಮರ್ಥ್ಯ ಕಡಿಮೆಯಾಗಲಿದೆ. ಜೊತೆಗೆ ತಲೆನೋವು ಕೂಡ ಕಾಣಿಸಿಕೊಳ್ಳಬಹುದು ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ. ಹಾಗಾಗಿ ನೀವು ಬಿಗಿಯಾದ ಬಟ್ಟೆ ಧರಿಸುವ ಮುನ್ನಾ ಯೋಚಿಸಿ.!