ಕೇರಳ: ಕೇರಳ ಮೂಲದ ಯುವಕನ ಜೊತೆಗೆ ಮದುವೆಯಾಗಿದ್ದ ನವವಿವಾಹಿತೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೇರಳದ ತಿರುವನಂತಪುರಂ ಜಿಲ್ಲೆಯ ಪಾಲೋಡ್‌ನ ಇಳವಟ್ಟಂನಲ್ಲಿ ನಡೆದಿದೆ.ಇಂದುಜಾ ಆತ್ಮಹತ್ಯೆಗೆ ಶರಣಾದ ನವವಿವಾಹಿತೆ. ಇನ್ನು ಮಗಳ ಸಾವಿಗೆ ಆಕೆಯ ಗಂಡ ಕಾರಣ ಎಂದು ಮೃತಳ ಪೋಷಕರು ಆರೋಪಿಸಿದ್ದಾರೆ.
ಪಾಲೋಡ್ ಇಟಿಂಜಾರ್ ಕೊಳಚಲ್ ಕೊನ್ನಮೂಡ್ ಮೂಲದ ಇಂದುಜಾ (25) ಗಂಡನ ಮನೆಯಲ್ಲಿಯೇ ಶವವಾಗಿ ಪತ್ತೆಯಾಗಿದ್ದಾರೆ.ಅಭಿಜಿತ್ ಎಂಬಾತನನ್ನು ಪ್ರೀತಿ ಮಾಡುತ್ತಿದ್ದ ಇಂದುಜಾ ಮದುವೆಗೆ ಪೋಷಕರು ವಿರೋಧ ವ್ಯಕ್ತಪಡಿಸಿದ್ದರು. ಪ್ರೀತಿ ಬಿಟ್ಟುಬಿಡು, ಒಳ್ಳೆಯ ಹುಡುಗನನ್ನು ನೋಡುತ್ತೇವೆ. ಮದುವೆಯಾಗು ಎಂದು ಇಂದುಜಾಗೆ ಪೋಷಕರು ಎಷ್ಟೇ ಕೇಳಿಕೊಂಡರೂ, ಮನವಿ ಮಾಡಿದರೂ ಕೇಳಲೇ ಇಲ್ಲ. ಮದುವೆಯಾದರೆ ಅಭಿಜಿತ್ ಜೊತೆಗೆ ಎಂದುಕೊಂಡು ಮನೆ ಬಿಟ್ಟು ಓಡಿ ಹೋಗಿ ದೇವಸ್ಥಾನವೊಂದರಲ್ಲಿ ಮದುವೆಯಾಗಿದ್ದಳು. ಆ ಬಳಿಕ ಪೋಷಕರು ಸುಮ್ಮನಾಗಿದ್ದರು.ಮದುವೆಯಾಗಿ ಅಭಿಜಿತ್ ಮನೆಗೆ ಇಂದುಜಾ ಹೋದ ಬಳಿಕ ಆತನ ಅಸಲಿಯತ್ತು ಬಯಲಾಗಿದೆ.
ಪ್ರೀತಿಸಿ ಮದುವೆಯಾಗಿದ್ದರೂ ಗಂಡನ ಮನೆಯವರು ನಿತ್ಯವೂ ಇಂದುಜಾಳಿಗೆ ಮಾನಸಿಕ ಕಿರುಕುಳ ಹಾಗೂ ಬೆದರಿಕೆ ಹಾಕುತ್ತಿದ್ದರು ಎಂಬ ಆರೋಪ ಕೇಳಿ ಬಂದಿದೆ.ನಮ್ಮ ಮನೆಗೆ ಮಗಳು ಬರಬೇಕೆಂಬ ಆಸೆ ಇತ್ತಾದರೂ ಅವಕಾಶವೇ ಕೊಟ್ಟಿಲ್ಲ. ಪಾಲೋಡ್ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ನೀಡಿರುವ ಮೃತಳ ಪೋಷಕರು ಆಕೆ ಸಾವಿಗೆ ಅಭಿಜಿತ್ ಕಾರಣ. ಇಂದುಜಾ ಆತ್ಮಹತ್ಯೆ ಮಾಡಿಕೊಳ್ಳುವಂಥ ಹೇಡಿಯಲ್ಲ. ತನ್ನ ಗಂಡ ಅಭಿಜಿತ್‌ರ ಮನೆಯ ಎರಡನೇ ಮಹಡಿಯಲ್ಲಿರುವ ಮಲಗುವ ಕೋಣೆಯ ಕಿಟಕಿಯಿಂದ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅಭಿಜಿತ್ ಬಂಧಿಸುವಂತೆ ಒತ್ತಾಯಿಸಿದ್ದಾರೆ.ಅಭಿಜಿತ್ ಮಧ್ಯಾಹ್ನ ಮನೆಗೆ ಊಟ ಮಾಡಲು ಬಂದಾಗ ಇಂದುಜಾ ಕಿಟಕಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದಿದ್ದಾಳೆ ಎಂದು ತಿಳಿಸಲಾಗಿದೆ. ತಕ್ಷಣವೇ ನೆಡುಮಂಗಾಡ್ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ ಎಂದು ತಿಳಿದು ಬಂದಿದೆ.
ಎರಡು ವರ್ಷಗಳ ಕಾಲ ಇಬ್ಬರೂ ಪ್ರೀತಿಸುತ್ತಿದ್ದರು. ಆಕೆಯ ಮನೆಯಿಂದ ಓಡಿಸಿಕೊಂಡು ಹೋಗಿದ್ದ ಅಭಿಜಿತ್ ಆಕೆಯ ಜೊತೆ ಗಲಾಟೆ ಮಾಡುತ್ತಿದ್ದ ಎನ್ನಲಾಗಿದೆ. ಖಾಸಗಿ ಲ್ಯಾಬ್ ನಲ್ಲಿ ಇಂದುಜಾ ಕೆಲಸ ಮಾಡುತ್ತಿದ್ದರೆ, ಅಭಿಜಿತ್ ಖಾಸಗಿ ವಾಹನ ಕಂಪೆನಿಯಲ್ಲಿ ಉದ್ಯೋಗ ಮಾಡುತ್ತಿದ್ದ. ಘಟನೆ ನಡೆದಾಗ ಅಭಿಜಿತ್ ಅಜ್ಜಿ ಮಾತ್ರ ಮನೆಯಲ್ಲಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.ತಾಯಿ ಹಾಗೂ ಸಹೋದರನ ಜೊತೆ ಇಂದುಜಾ ಫೋನ್‌ನಲ್ಲಿ ಮಾತನಾಡುತ್ತಿದ್ದಳು ಎಂದು ಗಂಡನ ಮನೆಯವರು ಹೇಳಿದ್ದಾರೆ. ಇಂದುಜಾ ತನ್ನ ತಾಯಿ ಮತ್ತು ಸಹೋದರನೊಂದಿಗೆ ಫೋನ್‌ನಲ್ಲಿ ಮಾತನಾಡುತ್ತಿದ್ದಾಗ ಗಂಡನ ಮನೆಯವರ ಕಿರುಕುಳ ಹಾಗೂ ಬೆದರಿಕೆ ಬಗ್ಗೆ ತಿಳಿಸಿದ್ದಾಳಂತೆ. ಮಗಳ ಸಾವಿನಲ್ಲಿ ಅನೇಕ ಅನುಮಾನಗಳಿದ್ದು, ಸೂಕ್ತ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಮೃತಳ ಪೋಷಕರು ಒತ್ತಾಯಿಸಿದ್ದಾರೆ.