ನವದೆಹಲಿ: ಭಾರತದಲ್ಲಿ ತಂತ್ರಜ್ಞಾನ ಸಾರಿಗೆ ವ್ಯವಸ್ಥೆಯಲ್ಲಿ ಅನೇಕ ಆವಿಷ್ಕಾರಗಳನ್ನು ಮಾಡುತ್ತಿದ್ದು, ಈಗ ಐಐಟಿ ಮದ್ರಾಸ್ 410 ಮೀಟರ್ ಉದ್ದದ ಹೈಪರ್ ಲೂಪ್ ಟೆಸ್ಟ್ ಟ್ರ್ಯಾಕ್ ಅನ್ನು ಯಶಸ್ವಿಯಾಗಿ ಅಭಿವೃದ್ಧಿಪಡಿಸಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಗುರುವಾರ ಎಕ್ಸ್ ನಲ್ಲಿ ಹಂಚಿಕೊಂಡಿದ್ದಾರೆ.
ಹೈಪರ್ ಲೂಪ್ ರೈಲು ಪರೀಕ್ಷಾ ಟ್ರ್ಯಾಕ್ ನ ವೀಡಿಯೊವನ್ನು ಹಂಚಿಕೊಂಡ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್, “ಭಾರತದ ಮೊದಲ ಹೈಪರ್ ಲೂಪ್ ಟೆಸ್ಟ್ ಟ್ರ್ಯಾಕ್ (410 ಮೀಟರ್) ಪೂರ್ಣಗೊಂಡಿದೆ. ಟೀಮ್ ರೈಲ್ವೇಸ್, ಐಐಟಿ-ಮದ್ರಾಸ್ನ ಅವಿಷ್ಕರ್ ಹೈಪರ್ಲೂಪ್ ತಂಡ ಮತ್ತು ಟಿಯುಟಿಆರ್ (ಇನ್ಕ್ಯುಬೇಟೆಡ್ ಸ್ಟಾರ್ಟ್ಅಪ್) ಅನ್ನು ಅಭಿನಂದಿಸಿದ್ದಾರೆ.
ಐಐಟಿ ಮದ್ರಾಸ್ ತಂಡ ಮತ್ತು ಇನ್ಕ್ಯುಬೇಷನ್ ಸ್ಟಾರ್ಟ್ಅಪ್ ಭಾರತದ ಮೊದಲ ನಿರ್ವಾತ ರೈಲನ್ನು ಅಭಿವೃದ್ಧಿಪಡಿಸಲು ಒಟ್ಟಾಗಿ ಕೆಲಸ ಮಾಡುತ್ತಿವೆ. ಹೈಪರ್ ಲೂಪ್ ರೈಲಿನ ವಿವಿಧ ಹಂತಗಳನ್ನು ವಿನ್ಯಾಸಗೊಳಿಸಲು ಐಐಟಿ-ಮದ್ರಾಸ್ ತಂಡವು ಅವಿಷ್ಕರ್ ಯೋಜನೆಯಲ್ಲಿ ಕೆಲಸ ಮಾಡುತ್ತಿದೆ. ಟೆಕ್ ಬಿಲಿಯನೇರ್ ಎಲೋನ್ ಮಸ್ಕ್ 2012 ರಲ್ಲಿ ತಂತ್ರಜ್ಞಾನದ ಬಗ್ಗೆ ಹೊಸ ಸಂಶೋಧನೆಯನ್ನು ಘೋಷಿಸಿದಾಗ ತಂತ್ರಜ್ಞಾನವು ಹೊಸ ತಿರುವನ್ನು ಪಡೆಯಿತು. ಈ ತಂತ್ರಜ್ಞಾನದ ಅಭಿವೃದ್ದಿಯಲ್ಲಿ 76 ಪದವಿಪೂರ್ವ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳನ್ನು ಒಳಗೊಂಡಿದೆ.
ಈ ಯೋಜನೆಯನ್ನು ಎರಡು ಹಂತಗಳಲ್ಲಿ ಅಭಿವೃದ್ಧಿಪಡಿಸಲಾಗುವುದು, ಮೊದಲನೆಯದು ತಂತ್ರಜ್ಞಾನವನ್ನು ಪ್ರದರ್ಶಿಸಲು ಮತ್ತು ಪ್ರಮಾಣೀಕರಿಸಲು 11.5 ಕಿಲೋಮೀಟರ್ ಟ್ರ್ಯಾಕ್ ನಿರ್ಮಾಣವನ್ನು ಒಳಗೊಂಡಿರುತ್ತದೆ. ಅಗತ್ಯ ಪರೀಕ್ಷೆಗಳು ಪೂರ್ಣಗೊಂಡ ನಂತರ, ಎರಡನೇ ಹಂತವನ್ನು ಸುಮಾರು 100 ಕಿ.ಮೀ ಉಳಿದ ಮಾರ್ಗವನ್ನು ಅಭಿವೃದ್ದಿಪಡಿಸಲಾಗುವುದು.
ಹೈಪರ್ ಲೂಪ್ ರೈಲಿನ ಗರಿಷ್ಠ ವೇಗವನ್ನು ಗಂಟೆಗೆ 1100 ಕಿ.ಮೀ ಎಂದು ಅಂದಾಜಿಸಲಾಗಿದ್ದು, ಪ್ರಯೋಗಿಕವಾಗಿ ವೇಗವನ್ನು 360 ಕಿ.ಮೀ ಅಥವಾ ಸೆಕೆಂಡಿಗೆ 100 ಮೀಟರ್ ಗುರಿ ಹೊಂದಲಾಗಿದೆ.
ಭಾರತದ ಮೊದಲ ಹೈಪರ್ ಲೂಪ್ ರೈಲು ಯೋಜನೆ
ಮುಂಬೈ ಮತ್ತು ಪುಣೆ ನಡುವೆ ಕಾರ್ಯನಿರ್ವಹಿಸಲು ಸಜ್ಜಾಗಿರುವ ಭಾರತದ ಮೊದಲ ಹೈಪರ್ ಲೂಪ್ ರೈಲಿನ ಅಭಿವೃದ್ಧಿಗೆ ಕೆಲಸ ನಡೆಯುತ್ತಿದೆ. ರೈಲ್ವೆ ಯೋಜನೆಯು ಮುಂಬೈ ಮತ್ತು ಪುಣೆ ನಡುವಿನ ದೂರವನ್ನು ಕೇವಲ 25 ನಿಮಿಷಗಳಿಗೆ ಕಡಿತ ಗೊಳಿಸುತ್ತದೆ ಎಂದು ಫೈನಾನ್ಷಿಯಲ್ ಎಕ್ಸ್ಪ್ರೆಸ್ ವರದಿ ಮಾಡಿದೆ.