ನಮಸ್ಕಾರ ಎಲ್ಲ ಕರ್ನಾಟಕದ ಜನತೆಗೆ, ಭಾರತದಲ್ಲಿ ಎಲ್ಲಾ ಖಾಸಗಿಯ ಟೆಲಿಕಾಂ ಕಂಪನಿಗಳಾದ ಜಿಯೋ, ಏರ್ಟೆಲ್ ಹಾಗೂ ಇನ್ನಿತರ ಕಂಪನಿಗಳು ತನ್ನ ರಿಚಾರ್ಜ್ ಬೆಲೆ ಏರಿಕೆ ಆದನಂತರ, ಭಾರತದ ಸರ್ಕಾರಿ ಟೆಲಿಕಾಂ ಕಂಪನಿಯು ಬಿಎಸ್ಎನ್ಎಲ್ ತನ್ನ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್ ಗಳನ್ನು ಬಿಡುಗಡೆ ಮಾಡುವ ಮೂಲಕ ಗ್ರಾಹಕರಿಗೆ ಹೆಚ್ಚಿನ ಪ್ರಯೋಜನ ನೀಡಿ. ಗ್ರಾಹಕರನ್ನು ಆಕರ್ಷಿಸಲು ಸಾಕಷ್ಟು ಪ್ರಯತ್ನವನ್ನು ಮಾಡುತ್ತಿದೆ. ಮತ್ತು ಬಿಎಸ್ಎನ್ಎಲ್ ತನ್ನ ಗ್ರಾಹಕರಿಗೆ 3,600gb ಡೇಟಾ ಹೊಸ ಪ್ಲಾನ್ ಬಿಡುಗಡೆ ಮಾಡಿದೆ.
ಹೌದು ಭಾರತದಲ್ಲಿ ಎಲ್ಲ ಖಾಸಗಿ ಕಂಪನಿಗಳು ತಮ್ಮ ರಿಚಾರ್ಜ್ ಬೆಲೆ ಏರಿಕೆ ಮಾಡಿದ ನಂತರ ಗ್ರಾಹಕರಿಗೆ ಸಾಕಷ್ಟು ಆತಂಕ ಉಂಟಾಗಿತ್ತು ಇದರ ನಡುವೆ ಬಿಎಸ್ಎನ್ಎಲ್ ಬಂದು ಗ್ರಾಹಕರಿಗೆ ಸಾಕಷ್ಟು ಸಿಹಿ ಸುದ್ದಿಯನ್ನು ನೀಡಿದೆ. ಇದರ ನಡುವೆ ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಉತ್ತಮ ಡೇಟಾ ಪ್ಲಾನ್ ಅನ್ನು ಬಿಡುಗಡೆ ಮಾಡಿದೆ. ಈ ಪ್ಲಾನ್ ನಲ್ಲಿ ಯಾವೆಲ್ಲ ಪ್ರಯೋಜನಗಳು ಸಿಗಲಿವೇ ಎಂಬುದರ ಸಂಪೂರ್ಣ ಮಾಹಿತಿ ಈ ಕೆಳಗೆ ನೀಡಿದೆ.
BSNL 3500GB ಡೇಟಾ ಪ್ಲಾನ್ ಮಾಹಿತಿ:
ಈ ಒಂದು ಪ್ಲಾನ್ ನ ಬೆಲೆ ಬಂದು ₹999 ಆಗಿದೆ ಇದನ್ನು ಗ್ರಾಹಕರು ರಿಚಾರ್ಜ್ ಮಾಡಿಸಿದರೆ, ಗ್ರಾಹಕರು 3 ತಿಂಗಳವರೆಗೆ ಮಾನ್ಯತೆಯನ್ನು ಪಡೆಯುತ್ತಾರೆ. ಒಟ್ಟು ಈ ಒಂದು ಪ್ಲಾನ್ ನಲ್ಲಿ 3500gb ಡೇಟಾ ನೀಡುತ್ತದೆ, ಹಾಗೂ ಪ್ರತಿ ತಿಂಗಳಿಗೆ 1200gb ಮಾತ್ರ ಬಳಸಬಹುದು, ಹಾಗೂ ಅನಿಯಮಿತ ಕರೆಗಳನ್ನು ಗ್ರಾಹಕರು ಈ ಒಂದು ಯೋಜನೆಯಲ್ಲಿ ಪಡೆಯುತ್ತಾರೆ.
ಬಿಎಸ್ಎನ್ಎಲ್ ಗ್ರಾಹಕರು ಈ ಒಂದು ಯೋಜನೆಯಲ್ಲಿ 45mbps ವೇಗದ ಡೇಟಾ ಮಿತಿಯಲ್ಲಿ ಡೇಟಾವನ್ನು ಅನುಭವಿಸಬಹುದು. ಹಾಗೂ ಡೇಟಾ ಮಿತಿ ಮುಗಿದ ನಂತರ 4mbps ನಲ್ಲಿ ಡೇಟಾ ವೇಗವನ್ನು ಆನಂದಿಸಬಹುದು, ಈ ಒಂದು ಪ್ಲಾನ್ ನಲ್ಲಿ 500ಕ್ಕೂ ಹೆಚ್ಚು ಲೈವ್ ಟಿವಿ ಚಾನೆಲ್ಸ್ ಗಳು ಮತ್ತು 12 OTT ಅಪ್ಲಿಕೇಶನ್ ಚಂದದರಿಕೆಯನ್ನು ಪಡೆಯಬಹುದು.
ಬಿಎಸ್ಎನ್ಎಲ್ ತನ್ನ ನೆಟ್ವರ್ಕ್ ಸೇವೆಯನ್ನು ಉತ್ತಮಗೊಳಿಸಲು, 51 ಸಾವಿರಕ್ಕೂ ಹೆಚ್ಚು 4G ಟವರ್ ಗಳನ್ನು ಸ್ಥಾಪಿಸಲು ಮುಂದಾಗಿದೆ ಇದರಿಂದ ಗ್ರಾಹಕರಿಗೆ ಉತ್ತಮ ನೆಟ್ವರ್ಕ್ ಸೇವೆಯನ್ನು ನೀಡಬಹುದಾಗಿದೆ.