ನವದೆಹಲಿ: ರೈಲು ಟಿಕೆಟ್ ಬುಕ್ ಮಾಡುವ ಐಆರ್‌ಸಿಟಿಸಿ ವೆಬ್ಸೈಟ್ ಸ್ಥಗಿತಗೊಂಡಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ.
ಕಳೆದ ಎರಡು ಗಂಟೆಯಿಂದ ರೈಲ್ವೆ ಟಿಕೆಟ್ ಬುಕಿಂಗ್ ಮಾಡಲಾಗದೇ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ. ತತ್ಕಾಲ್ ಟಿಕೆಟ್ ಬುಕಿಂಗ್ ಸಮಯವಾದ ಬೆಳಗ್ಗೆ 11ರಿಂದಲೇ ಐಆರ್ಸಿಟಿಸಿ ವೆಬ್‌ಸೈಟ್ ಸ್ಥಗಿತಗೊಂಡಿದೆ. ನಿರ್ವಹಣಾ ಕಾರ್ಯಗಳು ನಡೆಯುತ್ತಿವೆ. .
ಐಆರ್‌ಸಿಟಿಸಿ ಸರ್ವರ್ ಡೌನ್ ಆಗಿರುವುದರಿಂದ ಮತ್ತು ಆನ್ಲೈನ್ನಲ್ಲಿ ಟಿಕೆಟ್ ಕಾಯ್ದಿರಿಸಲು ಸಾಧ್ಯವಾಗದ ಕಾರಣ ರೈಲು ಪ್ರಯಾಣಿಕರು ಆತಂಕ ವ್ಯಕ್ತಪಡಿಸಿದರು. ಭಾರತೀಯ ರೈಲ್ವೆ ಪ್ರಯಾಣಿಕರ ಪ್ರಶ್ನೆಗೆ ತಕ್ಷಣ ಪ್ರತಿಕ್ರಿಯಿಸಿದ್ದು, ತಾಂತ್ರಿಕ ತಂಡವು ಸರಿಪಡಿಸಲು ಯತ್ನಿಸುತ್ತಿದೆ. ಮೇಲೆ ಕೆಲಸ ಮಾಡುತ್ತಿದೆ ಮತ್ತು ಶೀಘ್ರದಲ್ಲೇ ಎಲ್ಲರಿಗೂ ಬುಕಿಂಗ್ ಲಭ್ಯವಾಗಲಿದೆ.