ಇಸ್ಲಾಮಾಬಾದ್: ಅಫ್ಗಾನಿಸ್ತಾನದ ರಾಜಧಾನಿ ಕಾಬೂಲ್ನಲ್ಲಿ ಬುಧವಾರ ಭಯೋತ್ಪಾದಕರು ನಡೆಸಿದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ತಾಲಿಬಾನ್ ನಿರಾಶ್ರಿತರ ಸಚಿವ ಮತ್ತು ಇತರ ಇಬ್ಬರು ಮೃತಪಟ್ಟಿದ್ದಾರೆ.
ಅಧಿಕಾರಿಗಳು ಈ ಮಾಹಿತಿ ತಿಳಿಸಿದ್ದು, ಸಚಿವಾಲಯದ ಒಳಗೆ ಸಂಭವಿಸಿದ ಸ್ಫೋಟದಲ್ಲಿ ನಿರಾಶ್ರಿತರ ಸಚಿವ ಖಲೀಲ್ ಹಕ್ಕಾನಿ ಸಾವಿಗೀಡಾಗಿದ್ದಾರೆ. ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕವು ಹಕ್ಕಾನಿಯನ್ನು ಭಯೋತ್ಪಾದಕ ಎಂದು ಘೋಷಿಸಿತ್ತು. ಆತನ ಸುಳಿವು ನೀಡಿದರೆ, ಅಥವಾ ಹುಡುಕಿಕೊಟ್ಟರೆ $5 ಮಿಲಿಯನ್ ಬಹುಮಾನ ನೀಡುವುದಾಗಿ ಘೋಷಿಸಿತ್ತು.
ಮಸೀದಿಯಲ್ಲಿ ನಡೆದ ಈ ಸ್ಫೋಟದ ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್ ಖೊರಾಸನ್ ಹೊತ್ತುಕೊಂಡಿದೆ. ಖಲೀಲ್ ಹಕ್ಕಾನಿ ಮಧ್ಯಾಹ್ನ ಮಸೀದಿಯಲ್ಲಿ ಪ್ರಾರ್ಥನೆ ಮುಗಿಸಿ ಹೊರಡುತ್ತಿದ್ದಾಗ ಸ್ಫೋಟ ಸಂಭವಿಸಿದೆ.