ಪ್ರತಿದಿನವೂ ಬೆಳಗಿನ ಉಪಾಹಾರವನ್ನು ತಪ್ಪದೇ ಸೇವಿಸುವಂತೆ ತಜ್ಞರು ಸಲಹೆ ನೀಡುತ್ತಾರೆ. ನೀವು ದಿನವೂ ನಿಯಮಿತವಾಗಿ ಬೆಳಗಿನ ತಿಂಡಿ ತಿನ್ನುತ್ತಿದ್ದೀರಾ..? ಇಲ್ಲದಿದ್ದರೆ ತಕ್ಷಣ ರೂಢಿಸಿಕೊಳ್ಳಿ. ಬೆಳಗಿನ ತಿಂಡಿ ತಿನ್ನದೆ ಇರುವುದು ಸಾಕಷ್ಟು ಆರೋಗ್ಯ ತೊಂದರೆಗಳನ್ನುಂಟುಮಾಡುತ್ತದೆ.
ಒಂದು ವೇಳೆ ಬೆಳಗಿನ ಉಪಾಹಾರ ತಪ್ಪಿಸುತ್ತಿದ್ದರೆ ಈ ತಪ್ಪು ಮಾಡಬೇಡಿ. ಬೆಳಗಿನ ಉಪಾಹಾರವನ್ನು ದಿನದ ಮೊದಲ ಮತ್ತು ಪ್ರಮುಖ ಊಟ ಎಂದೇ ಕರೆಯಲಾಗುತ್ತದೆ. ಹೀಗಾಗಿ ಬೆಳಗಿನ ಉಪಾಹಾರವನ್ನು ಒಂದು ದಿನವೂ ತಪ್ಪದೇ ಸೇವನೆ ಮಾಡಲು ಸಲಹೆ ನೀಡುತ್ತಾರೆ. ಫ್ಯಾಷನ್ ಹೇಗೆ ದಿನವೂ ಹೊಸ ರೂಪ ಪಡೆಯುತ್ತದೆಯೋ ಹಾಗೆಯೇ ಇಂದಿನ ದಿನಗಳಲ್ಲಿ ಆಹಾರ ಪ್ರಕ್ರಿಯೆಗಳಲ್ಲೂ ಬದಲಾವಣೆ, ಹೊಸ ರೂಪ ಸಿಗುತ್ತಲೇ ಇದೆ.
ಮುಂಬರುವ ದಿನಗಳಲ್ಲಿ ಆಹಾರದ ಬಗ್ಗೆ ಅನೇಕ ಪ್ರವೃತ್ತಿಗಳು ಇವೆ. ಇವುಗಳಲ್ಲಿ ಕೆಲವು ಊಟಗಳ ನಡುವಿನ ಹೆಚ್ಚಿನ ಅಂತರವು ನಿಮಗೆ ದೀರ್ಘಾಯುಷ್ಯ, ತೂಕ ನಷ್ಟ, ಇತ್ಯಾದಿ ಪ್ರಯೋಜನ ನೀಡುತ್ತದೆ ಎಂದು ಹೇಳಲಾಗುತ್ತದೆ. ಆದರೆ ವಾಸ್ತವದಲ್ಲಿ ನೀವು ದೀರ್ಘಕಾಲ ಏನನ್ನೂ ತಿನ್ನದಿದ್ದಾಗ ಕೋಪ, ಕಿರಿಕಿರಿ, ಕೂದಲು ಉದುರುವಿಕೆ ಮುಂತಾದ ಹಲವು ಸಮಸ್ಯೆ ಎದುರಾಗುತ್ತವೆ. ಬೆಳಗಿನ ಉಪಾಹಾರ ನಿಯಮಿತವಾಗಿ ಸೇವನೆ ಮಾಡುವವರ ಮೆದುಳು ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಜತೆಗೆ ನಿಯಮಿತ ಉಪಾಹಾರ ಸೇವನೆ ಹೃದಯದ ತೊಂದರೆಯನ್ನು ತಡೆಯುತ್ತದೆ.
ಚಯಾಪಚಯ ಸಮತೋಲಿತವಾಗಿರುತ್ತದೆ. ಆರೋಗ್ಯಕರ ತೂಕ ಕಾಪಾಡಲು ಸಹಕಾರಿ. ಶಕ್ತಿಯು ದಿನವಿಡೀ ದೇಹದಲ್ಲಿ ಉಳಿಯುತ್ತದೆ. ಉಪಾಹಾರ ಸೇವನೆ ಮಾಡದಿದ್ದರೆ ಆಮ್ಲೀಯತೆ, ಊತ, ಎಂಗ್ಸೈಟಿ, ತಲೆನೋವು, ಮೈಗ್ರೇನ್, ಅನಿಯಮಿತ ಅವಧಿ, ವಿಟಮಿನ್ ಬಿ 12, ಡಿ ಕೊರತೆ, ಪ್ರೊಟೀನ್ ಕೊರತೆ ಉಂಟಾಗುತ್ತದೆ. ಪರೀಕ್ಷೆಗೆ ತಯಾರಿ ನಡೆಸುತ್ತಿರುವವರು, ಒತ್ತಡದ ಕೆಲಸದಲ್ಲಿರುವವರು, ಋತುಬಂಧ ಮತ್ತು ಗರ್ಭಿಣಿಯರು, ಕ್ರೀಡಾಪಟುಗಳು ಹಾಗೂ ದೀರ್ಘಕಾಲದ ಕಾಯಿಲೆಯ ರೋಗಿಗಳು ಬೆಳಗಿನ ಉಪಾಹಾರ ಸೇವನೆ ತಪ್ಪಿಸಲೇಬಾರದು ಎಂದು ವೈದ್ಯರು ಹೇಳುತ್ತಾರೆ. ಗೊರಕೆ ಹೊಡೆಯೋರಿಗೆ ಖುಷಿ ಸುದ್ದಿ, ಗಳಿಸಬಹುದು ಕೈ ತುಂಬಾ ಹಣ