ಉತ್ತರ ಪ್ರದೇಶ : ಯುಪಿಎಸ್‌ಸಿ ಪರೀಕ್ಷೆ ಬರೆಯುವ ಕೆಲ ಅಭ್ಯರ್ಥಿಗಳಿಗೆ ಸವಾಲುಗಳು ಎದುರಾಗುತ್ತವೆ. ಹೀಗೆ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಅಲಂಕೃತಾ ಪಾಂಡೆ ಅವರು ಸವಾಲನ್ನು ಮೆಟ್ಟಿ ನಿಂತು ಐಎಎಸ್ ಅಧಿಕಾರಿಯಾದ ಸ್ಫೂರ್ತಿದಾಯಕ ಕತೆ ಇದು.
ಅಲಂಕೃತಾ ಪಾಂಡೆ ಅವರು ಮೂಲತಃ ಉತ್ತರ ಪ್ರದೇಶದ ಕಾನ್ಪುರದವರು. ಅವರು ಎಂಎನ್‌ಎನ್‌ಐಟಿ ಅಲಹಾಬಾದ್‌ನಿಂದ ಇಂಜಿನಿಯರಿಂಗ್‌ನಲ್ಲಿ ಪದವಿ ಪಡೆಯುತ್ತಾರೆ. ಬಳಿಕ ಬೆಂಗಳೂರಿನ ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಾರೆ. ಅಲಂಕೃತಾ ಅವರಿಗೆ ಯುಪಿಎಸ್‌ಸಿ ಪರೀಕ್ಷೆ ಬರೆಯುವ ಹಂಬಲವಿತ್ತು.
ಬಳಿಕ ಅಲಂಕೃತಾ ಅವರು 2014 ರಲ್ಲಿ ಯುಪಿಎಸ್‌ಸಿ ಪರೀಕ್ಷೆಗೆ ತಯಾರಿ ಮಾಡಲು ನಿರ್ಧರಿಸುತ್ತಾರೆ. ಆದರೆ ಈ ವೇಳೆ ಅವರು ಕೆಲ ವೈಯಕ್ತಿಕ ಕಾರಣಗಳಿಂದಾಗಿ ಮಾನಸಿಕ ಖಿನ್ನತೆಗೆ ಒಳಗಾಗುತ್ತಾರೆ. ಹೀಗಾಗಿ ಅವರು ಯುಪಿಎಸ್‌ಸಿ ಪರೀಕ್ಷೆ ಬರೆಯುವುದನ್ನು ಕೈಬಿಡಬೇಕಾಯಿತು. ಆ ಬಳಿಕ ಖಿನ್ನತೆ ಹಾಗೂ ಕೋಪ ಹತೋಟಿಯಲ್ಲಿಡಲು ಚಿಕಿತ್ಸೆ ಪಡೆಯುತ್ತಾರೆ. ಈ ವೇಳೆ ಅಲಂಕೃತಾ ಅವರಿಗೆ ಸ್ನೇಹಿತರು, ಕುಟುಂಬದವರು ತುಂಬಾ ಬೆಂಬಲ ನೀಡುತ್ತಾರೆ.
2015ರ ಹೊತ್ತಿಗೆ ಗುಣಮುಖರಾದ ಅಲಂಕೃತಾ ಅವರು, ಯುಪಿಎಸ್‌ಸಿ ಪರೀಕ್ಷೆ ಬರೆಯಲು ನಿರ್ಧರಿಸುತ್ತಾರೆ. 2015ರಲ್ಲಿ ಯುಪಿಎಸ್‌ಸಿ ಪರೀಕ್ಷೆ ಬರೆದ ಅವರು, 85ನೇ ಅಖಿಲ ಭಾರತ ರ‍್ಯಾಂಕ್ ಪಡೆದು ಉತ್ತೀರ್ಣರಾಗುವಲ್ಲಿ ನಫಲರಾಗುತ್ತಾರೆ. ಈ ಮೂಲಕ ಅಲಂಕೃತಾ ಅವರು ಐಎಎಸ್ ಅಧಿಕಾರಿಯಾಗುತ್ತಾರೆ.
2016 ರ ಐಎಎಸ್ ಬ್ಯಾಚ್‌ಗೆ ಪ್ರವೇಶ ಪಡೆದ ಅಲಂಕೃತಾ ಅವರು, ಆರಂಭದಲ್ಲಿ ಪಶ್ಚಿಮ ಬಂಗಾಳದ ಕೇಡರ್‌ಗೆ ನಿಯೋಜನೆಗೊಳ್ಳುತ್ತಾರೆ. ನಂತರ, ಸಹ ಐಎಎಸ್ ಅಧಿಕಾರಿ ಅನ್ಶುಲ್ ಅಗರ್ವಾಲ್ ಅವರನ್ನು ವಿವಾಹವಾಗುತ್ತಾರೆ. ಆ ಬಳಿಕ ಅವರು ಬಿಹಾರ ಕೇಡರ್‌ಗೆ ವರ್ಗಾವಣೆಗೊಳ್ಳುತ್ತಾರೆ.