ಕರ್ನಾಟಕ ವಿಧಾನ ಪರಿಷತ್ (Karnataka Legislative Council) ಸಚಿವಾಲಯದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್ಲೈನ್ (Online) ಮೂಲಕ ಅರ್ಜಿ ಸಲ್ಲಿಸಬಹುದು.
ಹುದ್ದೆಗಳ ಸಂಖ್ಯೆ ಮತ್ತು ವಿದ್ಯಾರ್ಹತೆ :
1. ಸೀನಿಯರ್ ಪ್ರೋಗ್ರಾಮರ್ : 02 ಸಿಎಸ್, ಐಎಸ್ ಅಥವಾ ಎಲೆಕ್ಟ್ರಾನಿಕ್ ಆ್ಯಂಡ್ ಕಮ್ಯೂನಿಕೇಷನ್ನಲ್ಲಿ ಇಂಜಿನಿಯರಿಂಗ್ ಪದವಿ. ಸಂಬಂಧಿತ ಕ್ಷೇತ್ರದಲ್ಲಿ ಎರಡು ವರ್ಷದ ಅನುಭವ.
2. ಜೂನಿಯರ್ ಪ್ರೋಗ್ರಾಮರ್ : 02 ಸಿಎಸ್, ಐಎಸ್ ಅಥವಾ ಎಲೆಕ್ಟ್ರಾನಿಕ್ ಆ್ಯಂಡ್ ಕಮ್ಯೂನಿಕೇಷನ್ನಲ್ಲಿ ಇಂಜಿನಿಯರಿಂಗ್ ಪದವಿ. ಸಂಬಂಧಿತ ಕ್ಷೇತ್ರದಲ್ಲಿ ಎರಡು ವರ್ಷದ ಅನುಭವ.
3. ಜೂನಿಯರ್ ಕನ್ಸೋಲ್ ಆಪರೇಟರ್ : 04 ಸಿಎಸ್, ಐಎಸ್ ಅಥವಾ ಎಲೆಕ್ಟ್ರಾನಿಕ್ ಆ್ಯಂಡ್ ಕಮ್ಯೂನಿಕೇಷನ್ನಲ್ಲಿ ಇಂಜಿನಿಯರಿಂಗ್ ಪದವಿ. ಸಂಬಂಧಿತ ಕ್ಷೇತ್ರದಲ್ಲಿ ಒಂದು ವರ್ಷ ಅನುಭವ.
4. ಕಂಪ್ಯೂಟರ್ ಆಪರೇಟರ್ : 04 ಬಿಸಿಎ ಅಥವಾ ಸಿಎಸ್, ಎಲೆಕ್ಟ್ರಾನಿಕ್ಸ್ನಲ್ಲಿ ಬಿಎಸ್ಸಿ ಪದವಿ.
5. ಸಹಾಯಕರು : 03 ಕಾನೂನು ಪದವಿ.
6. ಕಿರಿಯ ಸಹಾಯಕರು : 08 ಪದವಿ.
7. ದತ್ತಾಂಶ ನಮೂದು ಸಹಾಯಕರು/ಬೆರಳಚ್ಚುಗಾರರು : 05 ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆ, ಕೆಎಸ್ಇಇಬಿಯ ಬೆರಳಚ್ಚುಗಾರ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು.
ವಯೋಮಿತಿ :
ಗರಿಷ್ಠ ವಯೋಮಿತಿ 38 ವರ್ಷ.
ವಯೋಮಿತಿ ಸಡಿಲಿಕೆ :
- ಪ.ಜಾ, ಪ.ಪಂ, ಪ್ರವರ್ಗ 1 ಅಭ್ಯರ್ಥಿಗಳಿಗೆ 5 ಮತ್ತು
- ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 3 ವರ್ಷ.
ಅರ್ಜಿ ಸಲ್ಲಿಕೆ :
- ವಿಶೇಷಚೇತನ ಅಭ್ಯರ್ಥಿಗಳಿಗೆ 250 ರೂ.,
- ಪ.ಜಾ, ಪ.ಪಂ, ಪ್ರವರ್ಗ I ಅಭ್ಯರ್ಥಿಗಳಿಗೆ 500 ರೂ.
- ಇತರೆ ಅಭ್ಯರ್ಥಿಗಳಿಗೆ 750 ರೂ. ಅರ್ಜಿ ಶುಲ್ಕವಿದೆ.
- ಆನ್ಲೈನ್ ಮೂಲಕ.
ಆಯ್ಕೆ ಪ್ರಕ್ರಿಯೆ : ಸ್ಪರ್ಧಾತ್ಮಕ ಪರೀಕ್ಷೆ.
ಅರ್ಜಿ ಸಲ್ಲಿಕೆಯ ಕಡೇಯ ದಿನ : ಜನವರಿ 3, 2025.
kea.kar.nic.in ಅಥವಾ etonline.karnataka.gov.in/kea ಇಲ್ಲಿಗೆ ಭೇಟಿ ನೀಡಿ.