ಚಿತ್ರದುರ್ಗ: ಮೆದೆಹಳ್ಳಿ ರಸ್ತೆಯಲ್ಲಿರುವ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ 25 ನೇ ವರ್ಷದ ಬ್ರಹ್ಮೋತ್ಸವ ಕಾರ್ಯಕ್ರಮ ದಿನಾಂಕ 16-12-2024 ರಿಂದ 21-12-2024 ರವರೆಗೆ ಕೇರಳದ ಪ್ರಧಾನ ಅರ್ಚಕರಾದ ಶ್ರೀ ವಿಷ್ಣು ಭಟ್ಟಾದಿ ಪಾಡ ತಂತ್ರಿಗಳು, ತ್ರಿಶೂರ . ಹಾಗೂ ದೇವಸ್ಥಾನದ ಪ್ರಧಾನ ಅರ್ಚಕರಾದ ಸತೀಶ್ ಶರ್ಮ ಸಂಗಡಗರಿಂದ ಪೂಜೆ ನೆರವೇರಲಿದೆ.
ಪ್ರತಿ ದಿನ ಮಹಾ ಗಣಪತಿ ಹೋಮ, ಸುದರ್ಶನ ಹೋಮ ,ಅಭಿಷೇಕ, ಉಷಾ0 ಪೂಜೆ, ನವಕಂ, ಪಂಚ ಗವ್ಯಂ ,ಕಳಸ ಪೂಜೆ, ಹುಚ್ಚ ಪೂಜೆ , ಹಾಗೂ ಸಂಜೆ ಅಂಕುರಾ ಪೂಜೆ, ಮೊಳಪೂಜೆ, ದೀಪಾರಾಧನೆ ,ಶ್ರೀ ಬೂತ ಬಲಿ, ಭಗವತಿ ಸೇವಾ, ಹತ್ತಾಳ ಪೂಜೆ, ಚತು ಶುದ್ದಿ, ದಾರ, ಪಂಚ ಗವ್ಯ ದ್ವಜಸ್ತಂಬ ಪೂಜೆ 18-12-2024 ಬುಧವಾರ ಸಂಜೆ 18 ಮೆಟ್ಟಿಲುಗಳ ಪಡಿ ಪೂಜ ಕಾರ್ಯಕ್ರಮ 22-12-2024 ಭಾನುವಾರ ಮಧ್ಯಾಹ್ನ 12 ಗಂಟೆಗೆ ಚಿತ್ರದುರ್ಗದ ನಗರದ ಜನತೆಗೆ ವಿಶೇಷ ಮಹಾ ಅನ್ನದಾನದ ಕಾರ್ಯಕ್ರಮವನ್ನು ಶ್ರೀ ಉದಯ ಶೆಟ್ಟಿ ವರ್ತಕರು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶರಣ್ ಕುಮಾರ್ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಟ್ರಸ್ಟ್. ಚಿತ್ರದುರ್ಗ ಇವರು ನೆರವೇರಿಸುವವರು.
13-01-2025 ಸೋಮವಾರ ಸಂಜೆ 6:00ಗೆ ಶ್ರೀ ಅಯ್ಯಪ್ಪ ಸ್ವಾಮಿಯ ದೇವರ ಆಭರಣ ಮೆರವಣಿಗೆ ನೀಲಕಂಠೇಶ್ವರ ದೇವಸ್ಥಾನದಿಂದ ಹೊರಟು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮುಖಾಂತರ ಶ್ರೀ ಸನ್ನಿಧಾನವನ್ನು ತಲುಪುವುದು. ದಿನಾಂಕ 14.01.2025 ಮಂಗಳವಾರ ಸಂಜೆ ಮಕರ ಸಂಕ್ರಮಣದ ಅಂಗವಾಗಿ ಶ್ರೀ ಅಯ್ಯಪ್ಪ ಸ್ವಾಮಿ ಸನ್ನಿಧಾನದಲ್ಲಿ ವಿಶೇಷವಾದ ಲಕ್ಷ ದೀಪೋತ್ಸವ ಕಾರ್ಯಕ್ರಮ ನೆರವೇರಿಸಲಾಗುವುದು.
ಈ ಎಲ್ಲಾ ಪೂಜಾ ಕಾರ್ಯಕ್ರಮಕ್ಕೆ ಚಿತ್ರದುರ್ಗದ ಸಕಲ ಭಕ್ತಾದಿಗಳು ಭಾಗವಹಿಸಿ ಯಶಸ್ವಿಗೊಳಿಸಬೇಕಾಗಿ ತಮ್ಮಲ್ಲಿ ವಿನಂತಿಸುತ್ತೇವೆ. ಅಧ್ಯಕ್ಷರು ಶರಣ್ ಕುಮಾರ್ ದೇವಸ್ಥಾನದ ಕಾರ್ಯದರ್ಶಿಯಾದ M P ವೆಂಕಟೇಶ್ ಉಪಾಧ್ಯಕ್ಷರಾದ ಮಲ್ಲಿಕಾರ್ಜುನ ದೇವಸ್ಥಾನದ ಗುರುಸ್ವಾಮಿ ಯಾದ ರಮೇಶ್ ಸ್ವಾಮಿಯವರು ಹಾಗೂ ಸದಸ್ಯರು ಪತ್ರಿಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.