ಹೈದರಾಬಾದ್ : ಪುಷ್ಪ 2 ಪ್ರದರ್ಶನದ ವೇಳೆ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಬೆಳಗ್ಗೆ ಪೊಲೀಸರು ತನ್ನನ್ನು ಬಂಧಿಸಲು ಪ್ರಯತ್ನಿಸುತ್ತಿರುವ ರೀತಿಯ ಬಗ್ಗೆ ನಟ ಅಲ್ಲು ಅರ್ಜುನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪೊಲೀಸರು ಸೀದಾ ಬೆಡ್ರೂಂಗೆ ನುಗ್ಗಿ, ವಿಚಾರಣೆ ಮಾಡಿದ್ದಾರೆ. ಡ್ರೆಸ್ ಬದಲಾಯಿಸಲು ಸಮಯವನ್ನೇ ನೀಡಿಲಿಲ್ಲ..ಪೊಲೀಸರೊಂದಿಗೆ ಮಾತನಾಡಿದ ಅಲ್ಲು ಅರ್ಜುನ್, ನಾನು ಸಹಕರಿಸಲು ಸಿದ್ಧನಿದ್ದೇನೆ, ನೀವು ನನ್ನನ್ನು ಕಸ್ಟಡಿಗೆ ತೆಗೆದುಕೊಳ್ಳುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ ನನ್ನ ಬೆಡ್ರೂಂಗೆ ನುಗ್ಗುವುದು, ಬಿಟ್ ಟೂ ಮಚ್’ ಎಂದು ಅಲ್ಲು ಹೇಳಿದ್ದಾರೆ. ಇನ್ನು ಅಲ್ಲು ಅರ್ಜುನ್ಗೆ ಕಾಫಿ ಕುಡಿಯಲು ಸಮಯ ನೀಡಿದ ಪೊಲೀಸರು ಪಾರ್ಕಿಂಗ್ ಸ್ಥಳಕ್ಕೆ ಕರೆದೊಯ್ದರು. ಮನೆಯಿಂದ ಹೋಗುವ ಮುಂಚೆ, ಪತ್ನಿ ಸ್ನೇಹಾ ರೆಡ್ಡಿಗೆ ಮುತ್ತಿಟ್ಟು, ಚಿಂತಿಸಬೇಡಿ ಎಂದು ಹೇಳಿ ಹೊರಟರು. ಸದ್ಯ ಈ ವಿಡಿಯೋ ವೈರಲ್ ಆಗಿದೆ.