ಶಿವಮೊಗ್ಗ: ಹಿಂದೂ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣದ ಸಾಕ್ಷಿದಾರನಿಗೆ ಸಾಕ್ಷಿ ಹೇಳದಂತೆ ಬೆದರಿಕೆ ಹಾಕಿದ ವ್ಯಕ್ತಿಯ ವಿರುದ್ಧ ಶಿವಮೊಗ್ಗ ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
2022ರ ಫೆಬ್ರವರಿಯಲ್ಲಿ ಹರ್ಷನ ಕೊಲೆಯಾಗಿತ್ತು. ಆಗ ಸಾಕ್ಷಿದಾರನು ಪೆಟ್ರೋಲ್ ಬಂಕ್ ವೊಂದರಲ್ಲಿ ಕೆಲಸ ಮಾಡುತ್ತಿದ್ದ. ಕೊಲೆ ಸಂಬಂಧಿ ಆರೋಪಿಗಳು ಪೆಟ್ರೋಲ್ ಬಂಕ್ ಗೆ ಬಂದು ಡೀಸೆಲ್ ಹಾಕಿಸಿಕೊಂಡಿದ್ದರು. ಯುವಕನನ್ನು ಸಾಕ್ಷಿಯಾಗಿ ಎನ್‌ಐಎ ಅಧಿಕಾರಿಗಳು ಪರಿಗಣಿಸಿದ್ದರು. ಪ್ರಸ್ತುತ ಯುವಕ ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡುತ್ತಿಲ್ಲ. ಆದರೆ ಕೆಲವರು ಬಂದು ಆತನ ಬಗ್ಗೆ ವಿಚಾರಿಸಿ ಬಂಕ್ ನಲ್ಲಿ ಕೆಲಸ ಮಾಡುವ ಸಾಕ್ಷಿದಾರನ ಸ್ನೇಹಿತನಿಗೆ ಸಾಕ್ಷಿ ಹೇಳದಂತೆ ಎಚ್ಚರಿಕೆ ನೀಡಿ, ಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.