ಅರುಣಾಚಲ : ಉದ್ಯೋಗ ಮಾಡಿಕೊಂಡು ಪರೀಕ್ಷೆಗೆ ತಯಾರಿ ನಡೆಯುವುದು ಅಸಾಧ್ಯ ದ ಮಾತು. ಆದರೆ ಆ ಮಾತನ್ನು ಸುಳ್ಳು ಮಾಡಿದ್ದಾರೆ ಯಶ್ನಿ ನಾಗರಾಜನ್ . ಅವರು ಬ್ಯಾಂಕ್ ನಲ್ಲಿ ಕೆಲಸ ಮಾಡಿಕೊಂಡೇ ಪರೀಕ್ಷೆ ಬರೆದು ಐಎಎಸ್ ಅಧಿಕಾರಿಯಾಗಿದ್ದಾರೆ. ಅವರ ಯಶ್ಸಿನ ಮೆಟ್ಟಿಲು ಇಲ್ಲಿದೆ.
ಅರುಣಾಚಲ ಪ್ರದೇಶದ ನಿವಾಸಿಯಾದ ಐಎಎಸ್ ಯಶ್ನಿ ನಾಗರಾಜನ್ ಅವರು ಉದ್ಯೋಗದೊಂದಿಗೆ ನಾಗರಿಕ ಸೇವೆಗಳ ಪರೀಕ್ಷೆಗೆ ತಯಾರಿ ನಡೆಸಿದ್ದರು.ಉದ್ಯೋಗದೊಂದಿಗೆ ಯುಪಿಎಸ್ಸಿ ಪರೀಕ್ಷೆಯಲ್ಲಿ ಯಶಸ್ವಿಯಾಗಬಹುದು ಎಂಬುದನ್ನು ಯಶ್ನಿ ಸಾಬೀತುಪಡಿದ್ದಾರೆ.
ಐಎಎಸ್ ಯಶ್ನಿ ನಾಗರಾಜನ್ ಅವರು ಆಂಧ್ರಪ್ರದೇಶದ ಕೇಂದ್ರೀಯ ವಿದ್ಯಾಲಯದಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ್ದಾರೆ. ಅವರ ತಂದೆ ತಂಗವೇಲ್ ನಾಗರಾಜನ್ ನಿವೃತ್ತ ರಾಜ್ಯ PWD ಇಂಜಿನಿಯರ್ ಮತ್ತು ಅವರ ತಾಯಿ ಗೌಹಾಟಿ ಹೈಕೋರ್ಟ್ ರಿಜಿಸ್ಟ್ರಿಯಲ್ಲಿ ಇಟಾನಗರ ಶಾಖೆಯಿಂದ ನಿವೃತ್ತರಾಗಿದ್ದಾರೆ.
ಯಶ್ನಿ ನಾಗರಾಜನ್ 2014 ರಲ್ಲಿ ಯುಪಿಯ ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ನಲ್ಲಿ EEE ನಲ್ಲಿ ತಮ್ಮ B.Tech ಅನ್ನು ಪೂರ್ಣಗೊಳಿಸಿದರು. ಇದಾದ ನಂತರ ರಿಸರ್ವ್ ಬ್ಯಾಂಕ್ ನಲ್ಲಿ ಗ್ರೇಡ್ ಬಿ ಅಧಿಕಾರಿಯಾಗಿ ಕೆಲಸ ಮಾಡಲು ಆರಂಭಿಸಿದರು. ಬ್ಯಾಂಕ್ ನಲ್ಲಿ ಪೂರ್ಣ ಸಮಯದ ಉದ್ಯೋಗದ ಜೊತೆಗೆ, UPSC ಪರೀಕ್ಷೆಗೆ ತಯಾರಿ ಆರಂಭಿಸಿದರು. 3 ಪ್ರಯತ್ನಗಳಲ್ಲಿ ವಿಫಲರಾದ ಅವರು ನಾಲ್ಕನೇ ಪ್ರಯತ್ನದಲ್ಲಿ ಯಶಸ್ವಿಯಾದರು.
ಐಎಎಸ್ ಯಶ್ನಿ ನಾಗರಾಜನ್ ಅವರು ಬ್ಯಾಂಕ್ ಉದ್ಯೋಗದೊಂದಿಗೆ ಪ್ರತಿನಿತ್ಯ 4-5 ಗಂಟೆಗಳ ಕಾಲ ಓದುತ್ತಿದ್ದರು. ಕಠಿಣ ಪರಿಶ್ರಮದಿಂದಾಗಿ ಯಶ್ನಿ ನಾಗರಾಜನ್ ಅವರು 2019 ರ UPSC ಪರೀಕ್ಷೆಯಲ್ಲಿ 57 ನೇ ರ್ಯಾಂಕ್ ಗಳಿಸಿದ್ದಾರೆ. ಪ್ರಸ್ತುತ ಅವರು ಮಹಾರಾಷ್ಟ್ರ ಕೇಡರ್ ನ ಐಎಎಸ್ ಅಧಿಕಾರಿಯಾಗಿದ್ದಾರೆ. ಸಹಾಯಕ ಕಾರ್ಯದರ್ಶಿಯಾಗಿ ಭಾರತ ಸರ್ಕಾರದ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಸೇರಿದ್ದಾರೆ.