ಕಾಸರಗೋಡು : ಕಾಸರಗೋಡಿನ ಇಡುಕ್ಕಿಯಿಂದ 3 ದಿನಗಳ ಹಿಂದೆ ನಾಪತ್ತೆಯಾಗಿದ್ದ ಬಾಲಕಿ(16) ಮತ್ತು ಆಕೆಯ ಪ್ರಿಯತಮ(18)ನನ್ನು ಕಾಂಞಂಗಾಡ್‌ನಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅವರ ಜತೆಗಿದ್ದ ತಮಿಳುನಾಡಿನ ನಿವಾಸಿಯನ್ನು ತನಿಖೆಗೊಳಪಡಿಸಿ ಬಿಡಲಾಗಿದೆ.
3 ದಿನಗಳ ಹಿಂದೆ ಇಡುಕ್ಕಿನಲ್ಲಿ ಇವರಿಬ್ಬರು ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಾಗಿತ್ತು. ಸೈಬರ್ ಸೆಲ್‌ನ ಸಹಾಯದೊಂದಿಗೆ ತನಿಖೆಯನ್ನು ನಡೆಸಿದರೂ ಮಾಹಿತಿ ಲಭಿಸಿರಲಿಲ್ಲ. ಇದೇ ವೇಳೆ ಈ ಇಬ್ಬರು ಮತ್ತು ಇನ್ನೋರ್ವ ವ್ಯಕ್ತಿ ಟಿಕೆಟ್ ಇಲ್ಲದೆ ಪ್ರಯಾಣಿಸಿ ರೈಲಿನ ಟಿಕೆಟ್ ಪರಿವೀಕ್ಷಕರಲ್ಲಿ ಸಿಕ್ಕಿಬಿದ್ದಿದ್ದರು, ಟಿಕೆಟ್ ಪರಿವೀಕ್ಷಕರು ಇವರನ್ನು ಕಾಂಞಂಗಾಡ್‌ನಲ್ಲಿ ಪೊಲೀಸರಿಗೊಪ್ಪಿಸಿದರು. ಪೊಲೀಸರು ವಿಚಾರಣೆ ನಡೆಸಿದಾಗ ಇಡುಕ್ಕಿಯಿಂದ ನಾಪತ್ತೆಯಾಗಿದ್ದ ಬಾಲಕಿ ಮತ್ತು ಯುವಕ ಇವರೆಂದು ತಿಳಿದುಬಂದಿದೆ.