ಬೆಳಗಾವಿ : ಬಿಜೆಪಿ -ಜೆಡಿಎಸ್ ನೂತನ ಶಾಸಕರಿಂದ 100 ಕೋಟಿ ವಿಶೇಷ ಅನುದಾನಕ್ಕಾಗಿ ಸಿಎಂ ಸಿದ್ದರಾಮಯ್ಯಗೆ ಪತ್ರ ಮೂಲಕ ಮನವಿ ಮಾಡಿಕೊಳ್ಳಲಾಗಿದೆ.
ಈ ಬಾರಿ ವಿಧಾನಸಭೆ ಹೊಸದಾಗಿ ಆಯ್ಕೆಯಾಗಿರುವ ವಿಜಯೇಂದ್ರ,ಯಶಪಾಲ್ ಸುವರ್ಣ,ಸುರೇಶ್ ಶೆಟ್ಟಿ ಶೈಲೇಂದ್ರ ಬೆಲ್ದಾಳೆ,ಕರೆಮ್ಮ ನಾಯಕ್ಸ ಮೃದ್ಧಿ ಮಂಜುನಾಥ್ ಸೇರಿದಂತೆ 20ಕ್ಕೂ ಹೆಚ್ಚು ಶಾಸಕರಿಂದ ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆಯಲಾಗಿದೆ. ಪತ್ರದಲ್ಲಿ ನಾವು ಹೊಸದಾಗಿ ಅಯ್ಕೆಯಾದ ಶಾಸಕರು, ಶಾಸಕರಾಗಿ 1 ವರ್ಷ 7 ತಿಂಗಳು ಕಳೆದಿದೆ ಕ್ಷೇತ್ರದಲ್ಲಿ ದಿನವೂ ಸಾರ್ವಜನಿಕರಿಂದ ಮನವಿ ಸ್ವೀಕರಿಸುತ್ತೇವೆ,ಜನರಿಂದ ಸಮಸ್ಯೆ ಇನ್ನಿತರ ಮನವಿ ಸ್ವೀಕರಿಸುತ್ತೇವೆ.
ಇಲ್ಲಿಯವರೆಗೆ ನಮ್ಮ ಕ್ಷೇತ್ರಗಳಿಗೆ ಸರಿಯಾದ ಅನುದಾನ ಸಿಕ್ಕಿಲ್ಲ ಹೀಗಾಗಿ ಶಾಸಕರ ಕ್ಷೇತ್ರಭಿವೃದ್ಧಿ ಅನುದಾನ 50 ಕೋಟಿ ಹಾಗೂ ವಿದ್ಯುತ್,ಬೀದಿ ದೀಪ ಇನ್ನಿತರೆಗೆ 50 ಕೋಟಿ ಒಟ್ಟು 100ಕೋಟಿ ವಿಶೇಷ ಅನುದಾನವನ್ನ ನೀಡಬೇಕು ಎಂದು ಸಿಎಂ ಸಿದ್ದರಾಮಯ್ಯಗೆ ಹೊಸ ಶಾಸಕರಿಂದ ಪತ್ರ ಬರೆಯಲಾಗಿದೆ.