ಹೊಸದಿಲ್ಲಿ: ಆಧಾರ್ ವಿವರಗಳನ್ನು ಉಚಿತವಾಗಿ ನವೀಕರಿಸುವ ಗಡುವುವನ್ನು 14ನೇ ಜೂನ್ 2025 ರವರೆಗೆ ವಿಸ್ತರಿಸಲಾಗಿದೆ. ಇದರೊಂದಿಗೆ, ಆಧಾರ್ ಕಾರ್ಡ್‌ನಲ್ಲಿ ವಿಳಾಸವನ್ನು ಬದಲಾಯಿಸಲು ಬಯಸುವವರು ತಕ್ಷಣ ಅದನ್ನು ಆನ್‌ಲೈನ್‌ನಲ್ಲಿ ಉಚಿತವಾಗಿ ಮಾಡಬಹುದು.
ಯುಐಡಿಎಐ ನಿಯಮಗಳ ಪ್ರಕಾರ ಪ್ರತಿ ಹತ್ತು ವರ್ಷಗಳಿಗೊಮ್ಮೆ ಆಧಾರ್‌ಗೆ ಸಂಬಂಧಿಸಿದ ವಿವರಗಳನ್ನು ನವೀಕರಿಸಬೇಕಾಗುತ್ತದೆ. ಇದಕ್ಕಾಗಿ, ಆಯಾ ಪುರಾವೆ ದಾಖಲೆಗಳನ್ನು ಸಲ್ಲಿಸಬೇಕು. ‘ಮೈ ಆಧಾರ್’ ಪೋರ್ಟಲ್ ಮೂಲಕ ಮಾತ್ರ ಉಚಿತ ಸೇವೆಗಳು ಲಭ್ಯವಿವೆ. ಹೆಸರು, ಹುಟ್ಟಿದ ದಿನಾಂಕ, ವಿಳಾಸ ಮುಂತಾದ ಬದಲಾವಣೆಗಳನ್ನು ಸೇರಿಸಬಹುದು. ಉಚಿತ ಆಧಾರ್ ಅವಧಿ ಮುಗಿದ ನಂತರ ಕೇಂದ್ರಗಳಲ್ಲಿ ರೂ.50 ಪಾವತಿಸಿ ಮೊದಲಿನಂತೆ ನವೀಕರಿಸಿಕೊಳ್ಳಬಹುದು.