ದಾವಣಗೆರೆ : ನಗರದ ಶ್ರೀ ಕಾಳಿಕಾದೇವಿ ರಸ್ತೆಯಲ್ಲಿರುವ ಶ್ರೀ ಕಾಳಿಕಾದೇವಿ ವಿಶ್ವಕರ್ಮ ದೇವಸ್ಥಾನದಲ್ಲಿ ಮಂಗಳವಾರದಂದು ಶ್ರೀ ಕಾಳಿಕಾದೇವಿಯ ಕಡೆ ಕಾರ್ತಿಕೋತ್ಸವ ಅಂಗವಾಗಿ ಶ್ರೀದೇವಿಗೆ ವೇದೋಕ್ತ ಪಂಚಾಮೃತ ಅಭಿಷೇಕ, ವಿಶ್ವಕರ್ಮ ಅಷ್ಟೋತ್ತರ ಪೂಜೆ, ಪುಷ್ಪಾಲಂಕಾರ, ವಿಶೇಷ ಪೂಜಾ ಅಲಂಕಾರ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ರಾತ್ರಿ 7.30 ಗಂಟೆಗೆ ಶ್ರೀ ಕಾಳಿಕಾದೇವಿಯ ವಿಜೃಂಭಣೆಯಿಂದ ಕಾರ್ತಿಕ ದೀಪೋತ್ಸವವು ನಡೆಯಿತು. ಈ ಸಂದರ್ಭದಲ್ಲಿ ದೇವಸ್ಥಾನ ಟ್ರಸ್ಟ್ ಪ್ರಭಾರ ಅಧ್ಯಕ್ಷ ವಿ.ಷಣ್ಮುಖಪ್ಪ, ಸಹ ಕಾರ್ಯದರ್ಶಿ ಎಂ.ಡಿ.ಮೌನೇಶ್ವರಚಾರ್, ಆರ್.ಎಂ.ಪಂಚಾಕ್ಷರಚಾರ್, ಖಜಾಂಚಿ ಕೆ. ಕಾಳಾಚಾರ್, ಟ್ರಸ್ಟಿಗಳಾದ ಕಾಡಜ್ಜಿ ಕಾಳಚಾರ್, ಮಾಯಕೊಂಡದ ಎನ್. ಮೌನೇಶ್ ಹಾಗೂ ಸಮಾಜ ಬಾಂಧವರು ಮತ್ತು ಭಕ್ತಾಧಿಗಳು ಉಪಸ್ಥಿತರಿದ್ದರು.
ಕಾರ್ತಿಕೋತ್ಸವದ ವಿಶೇಷ ಪೂಜಾ ಕಾರ್ಯಕ್ರಮವು ಅರ್ಚಕರಾದ ಶ್ರೀ ಟೀಕಾಚಾರ್ ಮತ್ತು ವರ್ಗದವರಿಂದ ನಡೆಯಿತು.