ತೆಲಂಗಾಣ : ಪದ್ಮಶ್ರೀ ಪುರಸ್ಕೃತ ಜನಪದ ಕಲಾವಿದ ಮೊಗಿಲಯ್ಯ (67) ನಿಧನರಾಗಿದ್ದಾರೆ. ಕಿಡ್ನಿ ಕಾಯಿಲೆಯಿಂದ ಬಳಲುತ್ತಿದ್ದ ಅವರನ್ನು ವಾರಂಗಲ್‌ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಬೆಳಗ್ಗೆ ಆರೋಗ್ಯ ವಿಷಮಿಸಿ ಕೊನೆಯುಸಿರೆಳೆದರು.
‘ಬಳಗಂ’ ಸಿನಿಮಾದ ಕೊನೆಯ ದೃಶ್ಯದಲ್ಲಿ ಭಾವುಕ ಗೀತೆ ಹಾಡಿ ಕಣ್ಣಲ್ಲಿ ನೀರು ತರಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದ ಮೊಗಿಲಯ್ಯ, ಅಪರೂಪದ ಸಂಗೀತ ವಾದ್ಯ ಕಿನ್ನೆರಕ್ಕೆ ಮರುಜೀವ ಕೊಟ್ಟವರು. ಪವನ್ ಕಲ್ಯಾಣ್ ನಟಿಸಿದ್ದ ಭೀಮ್ಲಾ ನಾಯಕ್ ಚಿತ್ರದಲ್ಲೂ ಹಾಡಿದ್ದರು.!