ರಾಜಸ್ಥಾನ: ತನ್ನ ಕತ್ತರಿಸಿದ ಮೂಗನ್ನು ಬ್ಯಾಗ್ನಲ್ಲಿಟ್ಟುಕೊಂಡು ಮಹಿಳೆಯೊಬ್ಬರು ಆಸ್ಪತ್ರೆಗೆ ಬಂದಿರುವ ವಿಚಿತ್ರ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಜಲೋರ್ನ ಸೈಲಾ ಮೂಲದ ಕುಕಿ ದೇವಿ ಎಂಬಾಕೆ ಪಾಲಿಯಲ್ಲಿರುವ ಆಸ್ಪತ್ರೆಗೆ ತನ್ನ ಕತ್ತರಿಸಿದ ಮೂಗನ್ನು ಬ್ಯಾಗ್ನಲ್ಲಿಟ್ಟುಕೊಂಡು ಬಂದಿದ್ದರು.
ಕುಕಿ ದೇವಿ ಕೆಲವು ದಿನಗಳಿಂದ ಸೈಲಾ ಗ್ರಾಮದ ಮೋಕ್ನಿ ಎಂಬಲ್ಲಿ ತನ್ನ ತಾಯಿಯ ಮನೆಯಲ್ಲಿ ವಾಸಿಸುತ್ತಿದ್ದಳು, ಆಕೆಯ ಸಂಬಂಧಿಗಳ ನಡುವೆ ಜಮೀನಿನ ವಿಷಯದಲ್ಲಿ ಮನಸ್ತಾಪವಿತ್ತು. ಮಂಗಳವಾರ ಓಂ ಪ್ರಕಾಶ್ ಎಂಬವರು ಹಾಗೂ ಇತರರು ಚಾಕುವಿನಿಂದ ಆಕೆಯ ಮೇಲೆ ಹಲ್ಲೆ ನಡೆಸಿದ್ದಾರೆ, ಚಾಕುವಿನಿಂದ ಕುಕಿ ಮೂಗನ್ನು ಕತ್ತರಿಸಿದ್ದಾರೆ. ಆಕೆ ಕೂಡಲೇ ತುಂಡರಿಸಿದ ಮೂಗನ್ನು ಬ್ಯಾಗ್ನಲ್ಲಿಟ್ಟುಕೊಂಡು ಆಸ್ಪತ್ರೆಗೆ ಬಂದಿದ್ದಳು.
ಕುಕಿ ದೇವಿಗೆ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಜೋಧ್ಪುರದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬಂಗಾರ್ ಆಸ್ಪತ್ರೆಯ ಡಾ. ಜುಗಲ್ ಮಹೇಶ್ವರಿ ಅವರ ಮೂಗು ತೀವ್ರವಾಗಿ ಕತ್ತರಿಸಲ್ಪಟ್ಟಿದೆ ಮತ್ತು ಪ್ಲಾಸ್ಟಿಕ್ ಸರ್ಜರಿ ಮೂಲಕ ಮಾತ್ರ ಅದನ್ನು ಮರು ಜೋಡಿಸಬಹುದು ಎಂದು ಹೇಳಿದ್ದಾರೆ.
ಘಟನೆ ಸಂಬಂದ ಸೈಲಾ ಪೊಲೀಸರು ತಕ್ಷಣ ಪ್ರಮುಖ ಆರೋಪಿ ಓಂಪ್ರಕಾಶ್ ಸೇರಿದಂತೆ ಮೂವರನ್ನು ಬಂಧಿಸಿ, ಪ್ರಕರಣದ ತನಿಖೆ ಆರಂಭಿಸಿದ್ದಾರೆ.