ಚಿತ್ರದುರ್ಗ : ಕೇಂದ್ರ ಗೃಹ ಸಚಿವ ಅಮಿತ್ಷಾ ಲೋಕಸಭೆ ಅಧಿವೇಶನದಲ್ಲಿ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಹೆಸರಿನ ಬದಲಾಗಿ ದೇವರ ಹೆಸರನ್ನು ಜಪಿಸಿದರೆ ಸ್ವರ್ಗದಲ್ಲಿ ಸ್ಥಾನ ಸಿಗುತ್ತಿತ್ತೆಂದು ಹೇಳಿರುವುದನ್ನು ಖಂಡಿಸಿ ಜಿಲ್ಲಾ ಯುವ ಕಾಂಗ್ರೆಸ್ ಕಾನೂನು ಘಟಕದಿಂದ ಅಪರ ಜಿಲ್ಲಾಧಿಕಾರಿಗೆ ಗುರುವಾರ ಮನವಿ ಸಲ್ಲಿಸಲಾಯಿತು.
ಸಂವಿಧಾನ ಕುರಿತು ಚರ್ಚಿಸುತ್ತಿದ್ದ ಸಂದರ್ಭದಲ್ಲಿ ಅಂಬೇಡ್ಕ್ರ್ ಹೆಸರನ್ನು ಹೇಳುವುದಕ್ಕಿಂತ ದೇವರ ನಾಮಸ್ಮರಣೆ ಮಾಡುವಂತೆ ವಿವಾದಾತ್ಮಕವಾಗಿ ಮಾತನಾಡಿರುವ ಅಮಿತ್ಷಾ ಸಂವಿಧಾನಕ್ಕೆ ಅಪಮಾನ ಮಾಡಿದ್ದಾರೆ. ಕೂಡಲೆ ತಮ್ಮ ಸ್ಥಾನಕ್ಕೆ ರಾಜಿನಾಮೆ ಕೊಟ್ಟು ಬಹಿರಂಗವಾಗಿ ದೇಶದ ಜನರ ಕ್ಷಮೆ ಯಾಚಿಸಬೇಕು. ರಾಷ್ಟ್ರೀಯ ನಾಯಕರ ಅವಹೇಳನ ಕಾಯಿದೆ ಅಡಿಯಲ್ಲಿ ಅಮಿತ್ಷಾರವರಿಗೆ ಶಿಕ್ಷೆ ವಿಧಿಸುವಂತೆ ಜಿಲ್ಲಾ ಯುವ ಕಾಂಗ್ರೆಸ್ ಕಾನೂನು ಘಟಕದ ಅಧ್ಯಕ್ಷ ನ್ಯಾಯವಾದಿ ಶಶಾಂಕ್ ಎನ್. ಒತ್ತಾಯಿಸಿದರು.
ಯುವ ಕಾಂಗ್ರೆಸ್ ಕಾನೂನು ಘಟಕದ ಪ್ರಧಾನ ಕಾರ್ಯದರ್ಶಿ ಭರತ್ ಬಿ.ಟಿ. ಶಿವಕುಮಾರ್ ಎಸ್. ರುದ್ರಮುನಿ, ರಾಕೇಶ್ ಒಡೆಯರ್, ದುರುಗೇಶ್ ಈ ಸಂದರ್ಭದಲ್ಲಿದ್ದರು.