ಶಿವಮೊಗ್ಗ : ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಚನ್ನಗಿರಿ ರಸ್ತೆಯಲ್ಲಿರುವ ಗಣೇಶ್ ರೈಸ್ ಮಿಲ್ ನಲ್ಲಿ, ನಿನ್ನೆ ಸಂಜೆ ಬಾಯ್ಲರ್ ಸ್ಪೋಟಗೊಂಡಿದೆ. ಇದರ ಪರಿಣಾಮ ಸಾಕಷ್ಟು ಅವಘಡ ಸಂಬಂವಿಸಿದ್ದು, ಅನೇಕರಿಗೆ ಗಾಯಗಳಾಗಿವೆ. ಎಂದಿನಂತೆ ರೈಸ್ ಮಿಲ್ ನಲ್ಲಿ ಹದಿನೈದಕ್ಕೂ ಹೆಚ್ಚು ಜನ ಕೆಲಸ ಮಾಡುತ್ತಿದ್ದರು, ಆದರೆ ಇದಕ್ಕಿಂದಂತೆ ಬಾಯ್ಲರ್ ನಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿ ಸ್ಪೋಟಗೊಂಡಿದೆ.
ಇದರ ತೀವ್ರತೆಗೆ ಏಳು ಮಂದಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 20 ಕ್ಕೂ ಹೆಚ್ಚು ಅಗ್ನಿಶಾಮಕದಳ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ರಕ್ಷಣಾ ಕಾರ್ಯ ನಡೆಸಿದರು, ಇನ್ನೂ ಸ್ಪೋಟದ ತೀವ್ರತೆಗೆ ರೈಸ್ ಮಿಲ್ ನ ಅಕ್ಕಪಕ್ಕದ ಮನೆಗಳಿಗೂ ಹಾನಿಯಾಗಿದೆ ಜೊತೆಗೆ ರೈಸ್ ಮಿಲ್ ನ ಗೋಡೆ ಸಂಪೂರ್ಣವಾಗಿ ಕುಸಿದ್ದು ಬಿದ್ದಿದೆ. ರೈಸ್ ಮಿಲ್‌ನಲ್ಲಿದ್ದ ಕೆಲವು ಉಪಕರಣಗಳು ಬಹು ದೂರದವರೆಗೆ ಹಾರಿ ಹೋಗಿವೆ. ಇಂದಿರಾನಗರ ಬಡಾವಣೆಯಲ್ಲಿ ಮನೆಯೊಂದರ ಆರ್‌ಸಿಸಿ ಸೀಳಿ ಹೋಗಿದೆ. ಅನ್ವರ್ ಕಾಲೋನಿಯಲ್ಲಿ ಮನೆಯೊಂದರ ಮೇಲೆ ಉಪಕರಣವೊಂದು ಬಿದ್ದಿದೆ.
ಹಾಗಾಗಿ ಮನೆಯ ಹೆಂಚು ಪುಡಿಯಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಬಾಯ್ಲರ್ ಸ್ಫೋಟದಿಂದಾಗಿ ದೊಡ್ಡ ಮಟ್ಟದಲ್ಲಿ ಆಸ್ತಿಪಾಸ್ತಿ ಹಾನಿಯಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಕಟ್ಟಡಗಳು ಹಾನಿಗೀಡಾಗಿವೆ. ಲಾರಿ, ಬೈಕುಗಳು ಜಖಂ ಆಗಿವೆ. ಸದ್ಯ ಶೋಧ ಕಾರ್ಯ ಮುಂದುವರೆದಿದ್ದು, ಆಸ್ತಿಪಾಸ್ತಿ ಹಾನಿ ಕುರಿತು ಇನ್ನಷ್ಟೆ ಅಂದಾಜು ಮಾಡಬೇಕಿದೆ. ಘಟನೆ ಸ್ಥಳದಲ್ಲಿ ಡಿಸಿ, ಎಸ್ಪಿ ಸೇರಿದಂತೆ ಅಧಿಕಾರಿಗಳು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಸ್ಫೋಟದ ಸ್ಥಳದಲ್ಲಿ ಕಣ್ಮರೆಯಾಗಿದ್ದವನ ಶವ ಪತ್ತೆಯಾಗಿದೆ. ಮಿಸ್ಸಿಂಗ್ ಆಗಿದ್ದ ಬಾಯ್ಲರ್ ಆಪರೇಟರ್ ರಘು ಎಂಬಾತನ ಶವ ಇಂದು ಬೆಳಗಿನ ಜಾವ ಪತ್ತೆಯಾಗಿದ್ದು, ರಘುವಿನ ದೇಹ ನುಜ್ಜುಗುಜ್ಜಾಗಿದೆ. ಇನ್ನು ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ