ಭಾರತೀಯ ರೈಲ್ವೆ ಇಲಾಖೆಯು ವಿವಿಧ ಹುದ್ದೆಗಳಿಗೆ ಅರ್ಹರಿಂದ ಅರ್ಜಿಗಳನ್ನು ಆಹ್ವಾನಿಸಿದೆ. ರೈಲ್ ಇಂಡಿಯಾ ತಾಂತ್ರಿಕ ಹಾಗೂ ಆರ್ಥಿಕ ಸೇವೆಗಳು ಇಲಾಖೆಯಲ್ಲಿ ಹಲವು ಹುದ್ದೆಗಳು ಖಾಲಿ ಇದ್ದು, ನೇಮಕಾತಿ ಪ್ರಕ್ರಿಯೆ ಆರಂಭವಾಗಿದೆ.
ರೈಲ್ ಇಂಡಿಯಾ ತಾಂತ್ರಿಕ ಹಾಗೂ ಆರ್ಥಿಕ ಸೇವೆಗಳು ಇಲಾಖೆಯು ರೈಲ್ವೆ ಇಲಾಖೆಯಡಿ ಕಾರ್ಯ ನಿರ್ವಹಿಸುತ್ತಿದೆ. ಉದ್ಯೋಗಾಕಾಂಕ್ಷಿಗಳಿಂದ ಇಲ್ಲಿ ಖಾಲಿ ಇರುವ 15 ವಿವಿಧ ಹುದ್ದೆಗಳಿಗಾಗಿ ಅರ್ಜಿ ಕರೆಯಲಾಗಿದೆ. ಸಹಾಯಕ ವ್ಯವಸ್ಥಾಪಕ, ಸೈಟ್ ಇಂಜಿನಿಯರ್ ಹುದ್ದೆಗಳಿಗ ಭರ್ತಿ ನಡೆಯಲಿದ್ದು, ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಬೇಕು.
ನೇಮಕಾತಿ ಪೂರ್ಣ ಮಾಹಿತಿ ಇಲ್ಲಿದೆ
ನೇಮಕಾತಿ ಸಂಸ್ಥೆ: ರೈಲ್ ಇಂಡಿಯಾ ತಾಂತ್ರಿಕ ಹಾಗೂ ಆರ್ಥಿಕ ಸೇವಾ ಇಲಾಖೆ
ಹುದ್ದೆಗಳು ಎಷ್ಟು: 15
ಹುದ್ದೆಗಳ ಹೆಸರು: ಸಹಾಯಕ ವ್ಯವಸ್ಥಾಪಕ, ಸೈಟ್ ಇಂಜಿನಿಯರ್
ಪೋಸ್ಟಿಂಗ್: ಭಾರತದಲ್ಲಿ
ಮಾಸಿಕ ವೇತನ: ನಿಯಮಾನುಸಾರ
ಅರ್ಜಿ ಸಲ್ಲಿಕೆ: ಆನ್‌ಲೈನ್
ಗರಿಷ್ಠ ವಯಸ್ಸು: 32
ಅರ್ಜಿ ಸಲ್ಲಿಕೆ ಗರಿಷ್ಠ ವಯಸ್ಸು: ಜನವರಿ 10
ಹುದ್ದೆಗಳ ಪೂರ್ಣ ವಿವರ
* ಸೈಟ್ ಸರ್ವೇಯರ್
* ಸಹಾಯಕ ವ್ಯವಸ್ಥಾಪಕ
* ಗುಣಮಟ್ಟ ನಿಯಂತ್ರಣ ತಜ್ಞ
* ನಿವಾಸಿ ಇಂಜಿನಿಯರ್ (ಸಿವಿಲ್)
* ನಿವಾಸಿ ಎಂಜಿನಿಯರ್ (ಸೇತುವೆ)
* ಸೈಟ್ ಎಂಜಿನಿಯರ್
* ಸೈಟ್ ಎಂಜಿನಿಯರ್ (ಸೇತುವೆ)
* ವಲಯ ತಜ್ಞರು/ಸಿವಿಲ್ (ಸೇತುವೆ ವಿನ್ಯಾಸ).
ಶೈಕ್ಷಣಿಕ ವಿದ್ಯಾರ್ಹತೆ
ವಿವಿಧ ಹುದ್ದೆಗಳಿಗೆ ಆಯಾ ಶೈಕ್ಷಣಿಕ ಅರ್ಹತೆ ಅನುಸಾರ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಸ್ನಾತಕೋತ್ತರ ಪದವಿ, ಡಿಪ್ಲೊಮಾ, ಸಿವಿಲ್ ಇಂಜಿನಿಯರಿಂಗ್ ಪದವಿ, ಡಿಪ್ಲೊಮಾ, ಸಿವಿಲ್/ಎಲೆಕ್ಟ್ರಿಕಲ್/ಎಲೆಕ್ಟ್ರಾನಿಕ್ಸ್/ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿಯಲ್ಲಿ ಉತ್ತೀರ್ಣವಾದವರು ಅರ್ಜಿ ಸಲ್ಲಿಸಬಹುದಾಗಿದೆ ಎಂದು ನೇಮಕಾತಿ ಅಧಿಸೂಚನೆ ಮಾಹಿತಿ ನೀಡಿದೆ.
ಅಭ್ಯರ್ಥಿಗಳ ವಯಸ್ಸಿನ ಮಿತಿ
ಭಾರತೀಯ ರೈಲ್ವೆ ಇಲಾಖೆ ಆಹ್ವಾನಿಸಿರುವ ಹುದ್ದೆಗಳ ಪೈಕಿ ಸಹಾಯಕ ವ್ಯವಸ್ಥಾಪಕ ಹುದ್ದೆಗೆ ಗರಿಷ್ಠ 32 ವರ್ಷ ದಾಟಿರಬಾರದು. ಅದೇ ರೀತಿ ಉಳಿದ ಎಲ್ಲ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಗರಿಷ್ಠ ವಯಸ್ಸು 55 ವರ್ಷ ಮೀರಿರಬಾರದು ಎಂದು ರೈಲ್ವೆ ನೇಮಕಾತಿ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಅರ್ಜಿ ಶುಲ್ಕದ ವಿವರಅರ್ಜಿ ಶುಲ್ಕದ ಮಾಹಿತಿ ನೋಡುವುದಾದರೆ ಇಡಬ್ಲ್ಯೂಎಸ್/ಎಸ್‌ಸಿ/ಎಸ್‌ಟಿ/ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ 300 ರೂಪಾಯಿ ಹಾಗೂ ಸಾಮಾನ್ಯ ವರ್ಗ ಮತ್ತು ಓಬಿಸಿ ಅಭ್ಯರ್ಥಿಗಳಿಗೆ 600 ರೂಪಾಯಿ ನಿಗದಿ ಮಾಡಲಾಗಿದೆ.ಅರ್ಜಿ ಸಲ್ಲಿಸಲು ಜನವರಿ 10 ಕೊನೆಯ ದಿನವಾಗಿದ್ದು ಸಂದರ್ಶನವು ಜನವರಿ 9 ಹಾಗೂ 10ರಂದು ನಡೆಯಲಿದೆ. ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.