ಉಡುಪಿ: ಉಡುಪಿ ಜಿಲ್ಲೆಯ ಮಲ್ಪೆ ಬೀಚ್ ಬಳಿ ಇರುವ ಕುದ್ರು ನೆಸ್ಟ್ ರೆಸಾರ್ಟ್ ನಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಆಕಸ್ಮಿಕ ಬೆಂಕಿ ಹತ್ತಿಕೊಂಡಿದೆ ಈ ವೇಳೆ ರೆಸಾರ್ಟ್ ನಲ್ಲಿದ್ದ ಪ್ರವಾಸಿಗರು ಬೆಂಕಿ ಕಾಣುತ್ತಿದ್ದಂತೆ ತಕ್ಷಣ ಹೊರಗಡೆ ಓಡಿ ಬಂದಿದ್ದಾರೆ. ಕೂಡಲೇ ಸ್ಥಳೀಯರು ಅಲ್ಲಿದ್ದ ಪ್ರವಾಸಿಗರನ್ನು ರಕ್ಷಣೆ ಮಾಡಿರುವ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿದೆ.
ಹೌದು ಉಡುಪಿಯ ತಿಮ್ಮಣ್ಣ ಕುದ್ರು ದ್ವೀಪದಲ್ಲಿರುವ ಕುದ್ರು ನೆಕ್ಸ್ಟ್ ರೆಸಾರ್ಟ್ ನಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹತ್ತಿಕೊಂಡಿದೆ. ಈ ಸಂದರ್ಭದಲ್ಲಿ ಬಿದರಿನಿಂದ ನಿರ್ಮಿಸಿದ್ದ ಮಹಡಿ, ಅಲಂಕಾರಿಕ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ.ಬೆಂಕಿ ಹತ್ತಿದ್ದನ್ನು ಕಂಡು ಸ್ಥಳೀಯರು ಪ್ರವಾಸಿಗರನ್ನು ರಕ್ಷಿಸಿದ್ದಾರೆ.
ರೆಸಾರ್ಟ್ ಪಕ್ಕದಲ್ಲಿಯೇ ನದಿಯಿದಿದ್ದರಿಂದ ಭಾರಿ ಅನಾಹುತ ಒಂದು ತಪ್ಪಿದೆ. ನದಿಯ ನೀರನ್ನು ಬಳಸಿ ಸ್ಥಳೀಯ ನಿವಾಸಿಗಳು ರೆಸಾರ್ಟ್ಗೆ ಹೊತ್ತಿಕೊಂಡಿದ್ದ ಬೆಂಕಿಯನ್ನು ನಂದಿಸಿದ್ದಾರೆ.ಈ ವೇಳೆ ಸ್ಥಳೀಯರು ರೆಸಾರ್ಟ್ ಅಲ್ಲಿ ಸುರಕ್ಷತಾ ಕ್ರಮ ಕೈಗೊಂಡಿಲ್ಲವೆಂದು ಆರೋಪಿಸಿದ್ದಾರೆ. ಮಲ್ಪೆ ಪೊಲೀಸ್ ಠಾಣೆಯಲ್ಲಿ ಇದೀಗ ಈ ಒಂದು ಪ್ರಕರಣ ದಾಖಲಾಗಿದೆ.