ಸೌದಿ ಅರೇಬಿಯಾದ ಆರ್ಥಿಕ ಮೂಲವೇ ಅಲ್ಲಿನ ಕಚ್ಚಾತೈಲಗಳ ಹಾಗೂ ನೈಸರ್ಗಿಕ ಅನಿಲದ ವ್ಯಾಪಾರದಿಂದ. ಜಗತ್ತಿಗೆ ಈ ದೇಶದಿಂದ ಪೆಟ್ರೋಲ್, ಡಿಸೈಲ್ನ ಕಚ್ಚಾತೈಲಗಳು ಪೂರೈಕೆಯಾಗುತ್ತವೆ. ಅಷ್ಟೊಂದು ತೈಲ ಭಂಡಾರವನ್ನು ಹೊಂದಿರುವ ಈ ದೇಶಕ್ಕೆ ಈಗ ಮತ್ತೊಂದು ಜಾಕ್ಪಾಟ್ ಹೊಡೆದಿದೆ. ಈ ದೇಶದ ಸಮುದ್ರದ ಬಳಿ ಇರುವ ತೈಲ ಘಟಕದ ಬಳಿಯೇ ಬೃಹತ್ ಪ್ರಮಾಣ ಬಿಳಿ ಬಂಗಾರ ಎಂದು ಕರೆಸಿಕೊಳ್ಳುವ ಲಿಥಿಯಂನ ನಿಕ್ಷೇಪ ದೊರಕಿದೆ. ಸೌದಿ ಅರೇಬಿಯಾದ ಅರಾಮ್ಕೊ ಅಕಾ ಅರಾಮ್ಕೊ ರಾಜ್ಯದ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲದ ಕಂಪನಿಯು ಹೊಂದಿರುವ ತೈಲ ಘಟಕದ ಬಳಿಯೇ ಈ ಒಂದು ಅಮೂಲ್ಯವಾದ ಲಿಥಿಯಂನ ನಿಕ್ಷೇಪ ದೊರಕಿದೆ
ಗಣಿಗಾರಿಕೆಯ ಡೆಪ್ಯೂಟಿ ಮಿನಿಸ್ಟರ್ ಖಾಲಿದ್ ಬಿನ್ ಅಲ್ ಮುದಾಫಿರ್ ಹೇಳುವ ಪ್ರಕಾರ, ಆದಷ್ಟು ಬೇಗೆ ಪೈಲೆಟ್ ಪ್ರೋಗ್ರಾಮ್ ಬಳಿ ದೊರಕಿರುವ ಲಿಥಿಯಂ ಗಣಿಗಾರಿಕೆಯನ್ನು ಆರಂಭಿಸಲಾಗುವುದು ಎಂದು ಹೇಳಿದ್ದಾರೆ. ಕಿಂಗ್ ಅಬ್ದುಲ್ಲಾ ವಿಶ್ವವಿದ್ಯಾಲಯದಲ್ಲಿ ಅಭಿವೃದ್ಧಿಗೊಂಡಿರುವ ಆಧುನಿಕ ತಂತ್ರಜ್ಞಾನದಿಂದ ಲಿಥಿಯಂ ಗಣಿಗಾರಿಕೆಯನ್ನು ಆರಂಭಿಸಲಾಗುವುದು ಎಂದು ಮುದಾಫಿರ್ ಹೇಳಿದ್ದಾರೆ.
ಸೌದಿಗೆ ಮತ್ತೊಂದು ಆರ್ಥಿಕ ಮೂಲವಾಗಲಿದೆ ಲಿಥಿಯಂ
ಸೌದಿ ಅರೇಬಿಯಾದಲ್ಲಿ ದೊರಕಿರುವ ಲಿಥಿಯಂ ಈಗ ಅದನ್ನು ಮತ್ತೊಂದು ಶ್ರೀಮಂತಿಕೆಗೆ ಕೊಂಡೊಯ್ಯಲಿದೆ. ಮುಂಭರುವ ದಿನಗಳಲ್ಲಿ ಲಿಥಿಯಂ ಜಾಗತಿಕ ಇಂಧನ ಶಕ್ತಿಯಾಗುವ ಸಾಧ್ಯತೆಗಳು ಇವೆ. ಅದರ ಬೆಲೆಯೂ ಕೂಡ ತುಂಬಾ ದುಬಾರಿ. ಹೀಗಾಗಿ ಸದ್ಯ ಕಚ್ಚಾತೈಲದಿಂದಲೇ ಲಕ್ಷಾಂತರ ಕೋಟಿ ಗಳಿಸುತ್ತಿರುವ ಸೌದಿ ಅರೇಬಿಯಾ ಮುಂದು ಈ ಲಿಥಿಯಂನಿಂದಲೂ ಲಕ್ಷಾಂತರ ಕೋಟಿ ರೂಪಾಯಿ ಗಳಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ತೈಲ ಕಂಪನಿಗಳಾದ ಎಕ್ಸಾನ್ ಮೊಬೈಲ್ ಮತ್ತು ಆಕ್ಸಿಡೆಂಟಲ್ ಪೆಟ್ರೋಲಿಯಂ ಈಗೀರುವ ಟೆಕ್ನಾಲಜಿಯನ್ನು ಬಳಿಸಿಕಕೊಂಡು ಉಪ್ಪುನೀರಿನಿಂದ ಲಿಥಿಯಂನ್ನು ಬೇರ್ಪಡಿಸುವ ಕಾರ್ಯವನ್ನು ಕೈಗೊಳ್ಳಲಿದೆ ಎಂದು ಹೇಳಲಾಗಿದೆ.ಲಿಥಿಯಂ ಜಗತ್ತಿನಲ್ಲಿ ಅತಿ ವಿರಳವಾಗಿ ಸಿಗುವ ರಾಸಾಯನಿಕ ವಸ್ತು.ಅದಕ್ಕಾಗಿಯೇ ಇದನ್ನು ಬಿಳಿ ಬಂಗಾರ ಎಂದು ಕರೆಯುತ್ತಾರೆ. ಸದ್ಯ ಇದನ್ನು ಎಲೆಕ್ಟ್ರಾನಿಕ್ ವಸ್ತುಗಳನ್ನು ತಯಾರಿಸಲು ಉಪಯೋಗಿಸಲಾಗುತ್ತದೆ. ಲಿಥಿಯಂ ಬ್ಯಾಟರೀಸ್ಗಳನ್ನು ಎಲೆಕ್ಟ್ರಿಕ್ ಕಾರ್, ಲ್ಯಾಪಾಟಾಪ್ ಸ್ಮಾರ್ಟ್ಫೋನ್ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಆದರೆ ಮುಂಬರವು ದಿನಗಳಲ್ಲಿ ಇದು ತೈಲ ಶಕ್ತಿಗೆ ಪರ್ಯಾಯವಾಗಿ ನಿಲ್ಲಲಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿಯೇ ಸೌದಿ ಅರೇಬಿಯಾಗೆ ಒಂದು ದೊಡ್ಡ ಹಣದ ಹೊಳೆ ಹರಿಸುವ ಆರ್ಥಿಕ ಮೂಲವಾಗಿ ಈ ಲಿಥಿಯಂ ನಿಕ್ಷೇಪ ನಿಲ್ಲಲಿದೆ.