ನವದೆಹಲಿ: ರಾಷ್ಟ್ರ ರಾಜಧಾನಿಯ ಮೂರು ಶಾಲೆಗಳಿಗೆ ಕಳುಹಿಸಲಾದ ಬಾಂಬ್ ಬೆದರಿಕೆ ಇಮೇಲ್‌ಗಳನ್ನು ಅವರ ವಿದ್ಯಾರ್ಥಿಗಳೇ ಕಳುಹಿಸಿದ್ದಾರೆ ಎಂದು ದೆಹಲಿಪೊಲೀಸರ ತನಿಖೆಯಿಂದ ತಿಳಿದುಬಂದಿದೆ.
ಪೊಲೀಸರ ಪ್ರಕಾರ, ಒಂದು ಪ್ರಕರಣದಲ್ಲಿ, ಇಬ್ಬರು ಸಹೋದರರು ತಾವು ಪರೀಕ್ಷೆಗೆ ಸಿದ್ಧವಾಗಿಲ್ಲದ ಕಾರಣ ತಮ್ಮ ಪರೀಕ್ಷೆಗಳನ್ನು ಮುಂದೂಡಬೇಕೆಂದು ಬಾಂಬ್ ಬೆದರಿಕೆಯ ಇಮೇಲ್‌ಗಳನ್ನು ಕಳುಹಿಸಿದ್ದಾರೆ. ಇನ್ನೊಂದು ಪ್ರಕರಣದಲ್ಲಿ, ವಿದ್ಯಾರ್ಥಿಯು ಶಾಲೆಯನ್ನು ಆನ್‌ಲೈನ್ ತರಗತಿಗಳಿಗೆ ಬದಲಾಯಿಸಲು ಬಯಸಿದ್ದರು.