ಕಲಬುರಗಿ: ಸದನದಲ್ಲಿ ಸಿ.ಟಿ ರವಿ, ಸಚಿವೆ ಹೆಬ್ಬಾಳ್ಕರ್ (Lakshmi Hebbalkar) ಬಗ್ಗೆ ಅವಾಚ್ಯ ಶದ್ಧ ಬಳಸಿದ್ದು ಸತ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿದರು.
ಕಲಬುರಗಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿ.ಟಿ ರವಿ (CT Ravi) ಆ ಪದ ಬಳಸಿದ್ದು ಸತ್ಯ. ಏಕೆಂದರೆ ಈ ಬಗ್ಗೆ ವಿಡಿಯೋ, ಆಡಿಯೋ ಕ್ಲಿಪಿಂಗ್ ಇವೆ ಎಂದು ತಿಳಿಸಿದರು
ಎಂಎಲ್ಸಿ ಸಿ.ಟಿ ರವಿ ಪ್ರಕರಣವನ್ನ ನಮ್ಮ ಪೊಲೀಸರು ತನಿಖೆ (Police Investigation) ಮಾಡುತ್ತಿದ್ದಾರೆ. ಇದು ಕ್ರಿಮಿನಲ್ ಅಪರಾಧವಾಗಿದೆ. ಅಲ್ಲಿನ ಶಾಸಕರು, ಪರಿಷತ್ ಸದಸ್ಯರು ಇದಕ್ಕೆ ಸಾಕ್ಷಿಯಾಗಿದ್ದಾರೆ. ಬಿಜೆಪಿಯವರು ತಮ್ಮ ತಪ್ಪುಗಳನ್ನ ಮುಚ್ಚಿಕೊಳ್ಳಲು ನ್ಯಾಯಾಂಗ ತನಿಖೆಗೆ ಕೇಳುತ್ತಿದ್ದಾರೆ ಎಂದು ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದರು.
ರಾಷ್ಟ್ರೀಯ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಈ ರೀತಿ ಪದ ಬಳಿಕೆ ಖಂಡನೀಯವಾಗಿದೆ ಎಂದು ಸಿಎಂ ಅಸಮಾಧಾನ ಹೊರಹಾಕಿದ್ರು