ದಾವಣಗೆರೆ: ನಗರದ ಸೋದೆ ಶ್ರೀಗುರು ವಾದಿದಾರ ಮಠ ದೈವಜ್ಞ ಬ್ರಾಹ್ಮಣರ ಶಿಷ್ಯವೃಂದದಿಂದ ಸೋದೇ ಶ್ರೀಮಠದ ಉತ್ತರಾಧಿಕಾರಿ ಗುರುಗಳಾದ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದಂಗಳರಿಂದ ಡಿಸೆಂಬರ್ 23ರ ಸೋಮವಾರ ದಾವಣಗೆರೆ ನಗರದಲ್ಲಿ ಆಶೀರ್ವಚನ ಕಾರ್ಯಕ್ರಮ ಆಯೋಜಿಸಲಾಗಿದೆ.
23ರಂದು ಬೆಳಿಗ್ಗೆ ಶ್ರೀಗಳು ದಾವಣಗೆರೆಗೆ ಆಗಮಿಸಲಿದ್ದಾರೆ. ಅಂದು ಬೆಳಿಗ್ಗೆ ೭ಕ್ಕೆ ಶ್ರೀಪಾದಂಗಳವರನ್ನು ಮೆರವಣಿಗೆ ಮೂಲಕ ವಿನೋಬಾ ನಗರದ ೧ನೇ ಮುಖ್ಯರಸ್ತೆಯಲ್ಲಿನ ಶ್ರೀಮತಿ ಗೌರಮ್ಮ ನರಹರಿಶೇಟ್ ಸಭಾಭವನಕ್ಕೆ ಕರೆ ತರಲಾಗುವುದು. ನಂತರ ಸಂಜೆ ಶ್ರೀಗಳಿಮದ ಆಶೀರ್ವಚನ, ಪೂಜೆ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ನಂತರ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ.
೨೪ರ ಮಂಗಳವಾರ ಬೆಳಿಗ್ಗೆ ೧೦ಕ್ಕೆ ಶ್ರೀಗಳಿಂದ ಆಶೀರ್ವಚನ, ಶ್ರೀಗಳಿಗೆ ಪಾದಪೂಜೆ ನಡೆಯಲಿದ್ದು, ನಂತರ ಪ್ರಸಾದದ ವ್ಯವಸ್ಥೆ ಕಲ್ಪಿಸಲಾಗಿದೆ. ಕಾರ್ಯಕ್ರಮಕ್ಕೆ ದೈವಜ್ಞ ಬ್ರಾಹ್ಮಣರ ಸಮುದಾಯವು ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ನಲ್ಲೂರು ಎಸ್.ರಾಜಕುಮಾರ್, ಅಣ್ಣಪ್ಪ, ಸುರೇಂದ್ರ ಕೋರಿದ್ದಾರೆ.