ಬೆಟ್ಟದ ನೆಲ್ಲಿಕಾಯಿ (Hill Gooseberry) ಹುಳಿಯಾದರೂ ತಿಂದ ಬಳಿಕ ನೀರು ಕುಡಿದರೆ ಬಾಯೆಲ್ಲಾ ಸಿಹಿಯಾಗಿರುತ್ತದೆ. ವಿದೇಶಗಳಲ್ಲಿ ಹೆಚ್ಚಾಗಿ ಸಿಗುವ ಮಿರಾಕಲ್ ಫ್ರೂಟ್ ಅಥವಾ ಮಿರಾಕಲ್ ಬೆರ್ರಿ, ಮ್ಯಾಜಿಕ್ ಬೆರ್ರಿ, ಸ್ವೀಟ್ ಬೆರ್ರಿ ಎಂದು ಕರೆಯಲ್ಪಡುವ ಹಣ್ಣು ಸಹ ಇಂತಹ ಗುಣ ಹೊಂದಿದೆ
ಈ ಹಣ್ಣು ಆಫ್ರಿಕಾದಲ್ಲಿ (Africa) ಹೆಚ್ಚಾಗಿ ಕಂಡುಬರುತ್ತದೆ. ಇದು ತಿನ್ನಲು ಸ್ವಲ್ಪ ಸಿಹಿಯಾಗಿರುತ್ತದೆ. ಈ ಹಣ್ಣನ್ನು ತಿಂದ ಬಳಿಕ 30 ನಿಮಿಷಗಳ ಕಾಲ ಏನು ತಿಂದರೂ ಅದು ಸಿಹಿಯಾಗಿಯೇ ಇರುತ್ತದೆ. ಕಹಿ, ಹುಳಿ ತಿಂದರೂ ಕೂಡ ಅದು ಸಿಹಿಯಾಗಿರುತ್ತದೆ. ಯಾಕಿರಬಹುದು.?
ಈ ಹಣ್ಣಿನಲ್ಲಿ ಗ್ಲೈಕೊಪ್ರೊಟೀನ್ ಎಂಬ ಅಣುವಿದೆ (A molecule called a glycoprotein). ಈ ಹಣ್ಣನ್ನು ತಿಂದಾಗ ಈ ಅಣು ನಾಲಿಗೆಯ ರುಚಿ ಮೊಗ್ಗುಗಳಿಗೆ ಅಂಟಿಕೊಳ್ಳುತ್ತದೆ (sticks to). ಹೀಗಾಗಿ ಜನರು ಹುಳಿ ಅಥವಾ ಖಾರ ತಿಂದರೂ ಅದು ಸಿಹಿ ರುಚಿಯೇ ಎನ್ನಿಸುವುದು. ಅರ್ಧ ಘಂಟೆಯ ನಂತರ ಅಣು ಹೋಗಿ ಬಿಡುತ್ತದೆ.
ಈ ಸ್ವೀಟ್ ಹಣ್ಣನ್ನು ಹಲವಾರು ಔಷಧಗಳಲ್ಲಿ ಉಪಯೋಗ ಮಾಡಲಾಗುತ್ತದೆ. ನೈಜೀರಿಯಾದಲ್ಲಿ ಅಸ್ತಮಾ ಮತ್ತು ಮಧುಮೇಹದಂತಹ (Asthma and diabetes) ಕಾಯಿಲೆಗಳನ್ನು ಗುಣಪಡಿಸಲು ಬಳಸಲಾಗುತ್ತದೆ. ಪುರುಷ ದುರ್ಬಲತೆ ಮತ್ತು ಕ್ಯಾನ್ಸರ್ ಚಿಕಿತ್ಸೆ ನೀಡಲು ಬಳಕೆ ಮಾಡಲಾಗುತ್ತದೆ ಎಂದು ವರದಿಯಿಂದ ತಿಳಿದು ಬಂದಿದೆ.
ಪಶ್ಚಿಮ ಆಫ್ರಿಕಾದಲ್ಲಿ ಬೆಳೆಯುವ ಈ ಹಣ್ಣಿನ ಕುರಿತು ಅನೇಕರಿಗೆ ಗೊತ್ತಿಲ್ಲ. 18ನೇ ಶತಮಾನದವರೆಗೆ ಇದನ್ನು ಅಲ್ಲಿನ ಜನರಷ್ಟೆ ಸೇವಿಸುತ್ತಿದ್ದರು. ಆ ಬಳಿಕ ಈ ಹಣ್ಣನ್ನು ಯುರೋಪಿಯನ್ ಚೆವಲಿಯರ್ ಜಗತ್ತಿಗೆ ಪರಿಚಯಿಸಿದರು ಎಂದು ವರದಿ ತಿಳಿಸಿದೆ.
ಈ ಹಣ್ಣಿನ ಒಳಗೆ ಒಂದೇ ಬೀಜವಿದ್ದು (A single seed), ಅದನ್ನು ಅಮೆರಿಕನ್ನರು 1980ರಿಂದ ಬಳಕೆ ಮಾಡಲು ಪ್ರಾರಂಭಿಸಿದರು. ಪ್ರಚಾರದ ಕೊರತೆಯಿಂದಾಗಿ, ಇದನ್ನು ಕೆಲವೇ ದೇಶಗಳಲ್ಲಿ ಬೆಳೆಸಲಾಗುತ್ತಿದೆ.