ಮುಂಬೈ : ಬಾಲಿವುಡ್‌ನ ಸ್ಟಾರ್ ನಟಿ ಕರೀನಾ ಕಪೂರ್ ಅವರ ವಯಸ್ಸು 40 ದಾಟಿದ್ದರೂ ತಮ್ಮ ಫಿಟ್ನೆಸ್ ಮತ್ತು ಫ್ಯಾಶನ್ ಸೆನ್ಸ್ನಿಂದ ಜನರ ಗಮನ ಸೆಳೆಯುತ್ತಲೇ ಇರುತ್ತಾರೆ. ಅವರೊಂದಿಗೆ ನಟಿಸಲು ಹಲವಾರು ಕಲಾವಿದರು ತಮ್ಮ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ. ಆದರೆ ಪಾಕ್‌ನ ನಟರೊಬ್ಬರು ಕರೀನಾ ಜೊತೆ ಕೆಲಸ ಮಾಡುವ ಬಯಕೆಯನ್ನು ವ್ಯಕ್ತಪಡಿಸಿರುವುದಕ್ಕೆ ಅವರ ಅಭಿಮಾನಿಗಳು ಕೆರಳಿದ್ದಾರೆ.
ಹೌದು… ಪಾಕಿಸ್ತಾನದ ನಟ ಖಾಕನ್ ಶಹನವಾಜ್ ಅವರು ಕರೀನಾ ಅವರ ಮಗನಾಗಿ ನಟಿಸುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ. ಖಾಕನ್ ಶಹನವಾಜ್ ಅವರ ಹೇಳಿಕೆಯಿಂದಾಗಿ ಕರೀನಾ ಅವರ ಅಭಿಮಾನಿಗಳು ಗರಂ ಆಗಿದ್ದು, ಖಾಕನ್ ಶಹನವಾಜ್ ಅವರನ್ನು ಟ್ರೋಲ್ ಮಾಡಿದ್ದಾರೆ.
‘ಕರೀನಾ ಕಪೂರ್ ಅವರಿಗೆ ಅವಕಾಶ ಸಿಕ್ಕರೆ ಅವರೊಂದಿಗೆ ಯಾವ ರೀತಿಯ ಚಿತ್ರ ಮಾಡುತ್ತೀರಿ’ ಎಂದು ಅಭಿಮಾನಿಯೊಬ್ಬರು ಖಾಕನ್ ಶಹನವಾಜ್ ಅವರನ್ನ ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಅವರು, ‘ನನಗೆ ಅವಕಾಶ ಸಿಕ್ಕರೆ, ನಾನು ಅವರ ಮಗನಾಗಿ ತೆರೆಯ ಮೇಲೆ ನಟಿಸುತ್ತೇನೆ. ಏಕೆಂದರೆ ಕರೀನಾ ಮತ್ತು ನನ್ನ ನಡುವೆ ದೊಡ್ಡ ವಯಸ್ಸಿನ ಅಂತರವಿದೆ’ ಎಂದಿದ್ದಾರೆ. ನಟನ ಈ ಹೇಳಿಕೆ ವೈರಲ್ ಆದ ತಕ್ಷಣ, ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.