ಬೆಂಗಳೂರು : ಕರ್ನಾಟಕ ಸರ್ಕಾರ ರಾಜ್ಯದ ಉದ್ಯೋಗಾಕಾಂಕ್ಷಿಗಳಿಗೆ ಶುಭ ಸುದ್ದಿಯೊಂದನ್ನು ನೀಡಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ 9,871 ಹುದ್ದೆಗಳನ್ನು ಭರ್ತಿ ಮಾಡಲು ರಾಜ್ಯ ಸರ್ಕಾರ ಹಸಿರು ನಿಶಾನೆ ತೋರಿಸಿದೆ.
ಈ ಸಂಬಂಧ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಅಧಿಸೂಚನೆ (Undersecretary Notification) ಹೊರಡಿಸಿದ್ದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಈ ಕೆಳಗಿನ ವಿವಿಧ ಕೇಡರ್‌ಗಳ ಪ್ಯಾರಾಮೆಡಿಕಲ್ (Cadres Paramedical) ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಮತ್ತು ಗುತ್ತಿಗೆ/ಹೊರಗುತ್ತಿಗೆ (Lease/Outsourcing) ಆಧಾರದ ಮೇಲೆ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವವರೆಗೆ ಅಥವಾ ಒಂದು ವರ್ಷದ ಅವಧಿಗೆ ಭರ್ತಿ ಮಾಡಲು ಆಡಳಿತಾತ್ಮಕ ಅನುಮತಿಯನ್ನು ಕೋರಿವೆ ಎಂದು ತಿಳಿಸಿದ್ದಾರೆ.
ಗ್ರೂಪ್ – B :
* Clinical Instructor – 01.
* Assistant Entomologist – 07.
* Microbiologist – 12.
* Clinical Psychologist – 06.
* Psychiatric Social Worker – 07.
* Junior Chemist – 15.
ಗ್ರೂಪ್ – C :
* Pharmacist Officer – 640.
* Nursing Officer – 1,694.
* Primary Health Safety Officer (K.S.O. – Female) – 3,317.
* Health Inspector (K.S.O.) – 2,628.
* Junior Medical Laboratory School Technical Officer – 356.
* Senior Medical Laboratory School Technical Officer – 34.
* Junior Medical Radiology Imaging Officer – 59.
* Senior Medical Radiology Imaging Officer – 10.
* Ophthalmologist – 125.
* Field Health Education Officers – 83.
Total posts : 8,994.
ಕಲ್ಯಾಣ ಕರ್ನಾಟಕ ವೃಂದದ ಹುದ್ದೆಗಳ ವಿವರ :
ಗ್ರೂಪ್ – B :
* Assistant Entomologist – 02.
* Clinical Psychologist – 02.
* Junior Chemist – 03.
ಗ್ರೂಪ್ – C :
* Pharmacy Officer – 65.
* Nursing Officer – 351.
* Primary Health Safety Officer (K.S.O. – Female) – 133.
* Health Inspector (K.S.O.) – 221.
* Junior Medical Laboratory School Technical Officer – 57.
* Senior Medical Laboratory School Technical Officer – 02.
* Junior Medical Radiology Imaging Officer – 30.
* Ophthalmologist – 05.
* Field Health Education Officer – 06.
Total posts : 877.
ಪ್ರಸ್ತಾವನೆಯಲ್ಲಿ (In the proposal) ವಿವರಿಸಿರುವ ಅಂಶಗಳನ್ನು ಗಮನದಲ್ಲಿಟ್ಟುಕೊಂಡು, ಸರ್ಕಾರವು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ 1,205 ಪ್ರಾಥಮಿಕ ಆರೋಗ್ಯ ಭದ್ರತಾ ಅಧಿಕಾರಿಗಳು (ANMS) ಮತ್ತು 300 ಆರೋಗ್ಯ ನಿರೀಕ್ಷಕರ (HIOS) ಮಂಜೂರಾದ ಖಾಲಿ ಹುದ್ದೆಗಳನ್ನು ನೇರ ನೇಮಕಾತಿ ವಿಷಯದ ಮೂಲಕ ಭರ್ತಿ ಮಾಡಲು ಅನುಮತಿ ನೀಡಿದೆ ಮತ್ತು ಆದೇಶಿಸಿದೆ. ಇದಲ್ಲದೆ, ಆರೋಗ್ಯ ಸೇವೆಗಳ ಆಯುಕ್ತರು ನೇಮಕಾತಿ ಪ್ರಕ್ರಿಯೆಯನ್ನು ನಿಗದಿತ ಸಮಯದೊಳಗೆ ಪೂರ್ಣಗೊಳಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಮತ್ತು ಕೆಳಗೆ ವಿಧಿಸಲಾದ ಷರತ್ತುಗಳ ಕುರಿತು ಅನುಸರಣಾ ವರದಿಯನ್ನು (Follow-up report) ಸಲ್ಲಿಸಬೇಕು.