ಪಾಠವನ್ನು ಸುಲಭವಾಗಿ ಓದಿ ಪೂರ್ಣಗೊಳಿಸಲು ವೇಳಾಪಟ್ಟಿ ಅತ್ಯಗತ್ಯ. ಯಾವಾಗ ಓದಬೇಕು? ದಿನಕ್ಕೆ ಎಷ್ಟು ಗಂಟೆ ಅಧ್ಯಯನ ಮಾಡಬೇಕು? ಒಂದು ವಿಷಯಕ್ಕೆ ಎಷ್ಟು ಸಮಯವನ್ನು ನಿಗದಿಪಡಿಸಬೇಕು.
ಅದಕ್ಕೆ ತಕ್ಕಂತೆ ಓದಲು ಪ್ರಾರಂಭಿಸಿ. ಯಾವುದೇ ಉಪಪಠ್ಯ ಅಥವಾ ವಿಷಯವನ್ನು ಒಂದೇ ಬಾರಿಗೆ ಸಂಪೂರ್ಣವಾಗಿ ಓದುವುದು ಸೂಕ್ತವಲ್ಲ. ಇದು ಮರೆಯುವ ಅಪಾಯಕ್ಕೆ ಕಾರಣವಾಗುತ್ತದೆ.
ಆದ್ದರಿಂದ ದೊಡ್ಡ ವಿಷಯವನ್ನು ಸಣ್ಣ ಭಾಗಗಳಾಗಿ ವಿಭಜಿಸಿ ಓದುವುದರ ಜತೆಗೆ ಪಠ್ಯಕ್ರಮವನ್ನು ಪೂರ್ಣಗೊಳಿಸುವುದು ಸುಲಭ ಮಾರ್ಗವಾಗಿದೆ.