ಚಿತ್ರದುರ್ಗ: ಚಿತ್ರದುರ್ಗ ತಾಲ್ಲೂಕು ಕೃಷಿಕ ಸಮಾಜದ ನಡೆದ ಚುನಾವಣೆಯಲ್ಲಿ 14 ಸದಸ್ಯರುಗಳು ಆಯ್ಕೆ ಆಗಿದ್ದಾರೆ.
ಕೃಷಿಕ ಸಮಾಜಕ್ಕೆ ಹೊಸದಾಗಿ ಪದಾಧಿಕಾರಿಗಳ ಆಯ್ಕೆ ಸಭೆಯನ್ನು, ಜಂಟಿ ಕೃಷಿ ನಿರ್ದೇಶಕರ ಕಛೇರಿಯಲ್ಲಿ ಏರ್ಪಡಿಸಿದ್ದು ಈ ಸಭೆಯನ್ನು ಹಂಗಾಮಿ ಅಧ್ಯಕ್ಷರಾಗಿ ಹನುಮಂತರೆಡ್ಡಿ ಬಿನ್ ಸಿಂಪಯ್ಯ ಗುಡ್ಡದರಂಗವ್ವನಹಳ್ಳಿ ಇವರು ವಹಿಸಿದ್ದರು.
ಚಿತ್ರದುರ್ಗ, ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರಾದ ಶ್ರೀ ಹೆಚ್. ಕೆ. ರಾಮಕೃಷ್ಣ ಉಪಸ್ಥಿತಿಯಲ್ಲಿ ತಾಲ್ಲೂಕು ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾಗಿ ಶ್ರೀ ಬಿ.ಟಿ.ಜಗದೀಶ್ ಬಿನ್ ಬಿ.ಆರ್.ತಿಪ್ಪೇಸ್ವಾಮಿ, ಉಪಾಧ್ಯಕ್ಷರಾಗಿ ಶ್ರೀ ಎಂ.ಸತೀಶ್ ಬಿನ್ ಮುರುಗೇಂದ್ರಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ಶ್ರೀ ಕೆ. ಪ್ರಾಣೇಶ್ ಬಿನ್ ಕರಿಯಲ್ಲಪ್ಪ, ಖಜಾಂಜಿಯಾಗಿ ಶ್ರೀ ಪಟೇಲ್ ಸಿ.ಶಂಭುಲಿಂಗಪ್ಪ ಬಿನ್ ಪಟೇಲ್ ಚನ್ನಬಸಪ್ಪ, ಜಿಲ್ಲಾ ಪ್ರತಿನಿಧಿಯಾಗಿ ಶ್ರೀ ಆರ್.ಶಶಿಧರ್ ಬಿನ್ ಆರ್.ಆರ್. ರಾಮಕೃಷ್ಣಯ್ಯ ಇವರುಗಳನ್ನು 2025-26 ರಿಂದ 2029-30 ನೇ ಸಾಲಿನ ವರೆಗೆ ಚಿತ್ರದುರ್ಗ ತಾಲ್ಲೂಕು ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿಗೆ ಸರ್ವಾನುಮತದಿಂದ ಅವಿರೋದವಾಗಿ ಆಯ್ಕೆಯಾಗಿರುತ್ತಾರೆ.