ಚಿತ್ರದುರ್ಗ : ಅಲೆಮಾರಿ ಪಟ್ಟಿಯಿಂದ ಕೊರಚರನ್ನು ಹೊರಗಿಡುವ ಛಲವಾದಿ ನಾರಾಯಣಸ್ವಾಮಿ ಹೇಳಿಕೆಗೆ ಖಂಡಿಸಿ ಅವರ ರಾಜೀನಾಮೆಗೆ ಅಖಿಲ ಕರ್ನಾಟಕ ಕೊರಚ ಸಮುದಾಯ ಸಂಘಟನೆಗಳ ಆಗ್ರಹ ಪಡಿಸಿದೆ.
ಚಿತ್ರದುರ್ಗದಲ್ಲಿ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಕೂರಚ ಮಹಾ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ವೈ.ಕುಮಾರ್ ಕಳೆದ ವಾರ ಬೆಳಗಾವಿ ಸುವರ್ಣಸೌಧದಲ್ಲಿ ಕಲಾಪ ನಡೆಯುವ ವೇಳೆ ಸುವರ್ಣ ಸೌಧದ ಹೊರಗಡೆ ಪ್ರತಿಭಟನೆ ನಡೆಸುತ್ತಿದ್ದ ಅಲೆಮಾರಿ ಸಂಘಟನೆಯೊಂದರ ಮನವಿ ಸ್ವೀಕರಿಸಿ ಮಾತನಾಡಿದ ಛಲವಾದಿ ನಾರಾಯಣ ಸ್ವಾಮಿ ‘ಕೊರಚ, ಕೊರಮರು ಪರಿಶಿಷ್ಟ ಅಲೆಮಾರಿ ಪಟ್ಟಿ (49ರಲ್ಲಿ) ಬರುವುದಿಲ್ಲ.
ಮಾತ್ರವಲ್ಲ ಪರಿಶಿಷ್ಟ ಜಾತಿ ಒಳಮೀಸಲಾತಿ ಪಟ್ಟಿಗೂ ಅವರು ಸೇರುವುದಿಲ್ಲ ಎಂಬ ಹೇಳಿಕೆ ನೀಡಿರುವುದು ಅತ್ಯಂತ ಖಂಡನೀಯ. ಯಾವುದೇ ಆಧಾರವಿಲ್ಲದ ಈ ರೀತಿ ಹೇಳಿಕೆ ನೀಡಿ, ಅಲೆಮಾರಿ ಸಮುದಾಯಗಳ ನಡುವೆ ಜಗಳ ಹಚ್ಚುವ ಕೆಲಸ ಮಾಡಿರುವ ನಾರಾಯಣ ಸ್ವಾಮಿ ಕೂಡಲೇ ತನ್ನ ಹೇಳಿಕೆಯನ್ನು ಹಿಂತೆಗೆದುಕೊಂಡು ಸಮಾಜದ ಕ್ಷಮೆ ಕೇಳಬೇಕು. ಕೊರಚ ಕೊರಮ ಸಮುದಾಯದ ಸಂಘಟನೆಗಳು ನಾರಾಯಣ ಸ್ವಾಮಿ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆಗೆ ಕರೆ ನೀಡಲಿದ್ದೇವೆ ಎಂದು ಎಚ್ಚರಿಸಿದ್ದಾರೆ.
ಕೊರಚ ಸಮುದಾಯ ತಲತಲಾಂತರಿದಿಂದ ‘ಕಳ್ಳರು’ ಎಂಬ ಹಣೆಪಟ್ಟಿಯನ್ನು ಕಟ್ಟಿಕೊಂಡು ಬದುಕುತ್ತಿದೆ. ಬ್ರಿಟಿಷರ ಆಗಮನದ ಬಳಿಕ ಅವರು ತಂದ ರಸ್ತೆ ಸಾರಿಗೆ ಕೊರಚರ ಜೀವನಧಾರವಾಗಿದ್ದ ಎತ್ತುಗಳ ಮೂಲಕ ಸರಕುಸಾಗಣೆ ವೃತ್ತಿಗೆ ಏಟು ಬಿತ್ತು. ಆಗ ಕೊರಚರು ಹೊಟ್ಟೆಪಾಡಿಗಾಗಿ ಆಹಾರಧಾನ್ಯ ಕಳ್ಳತನಕ್ಕೆ ಇಳಿದರು ಎಂದು ಚರಿತ್ರೆ ಹೇಳುತ್ತದೆ. ಅದನ್ನೇ ದೊಡ್ಡದು ಮಾಡಿದ ಬ್ರಿಟಿಷರು ಕಿಮಿನಲ್ ಟೈಬಲ್ ಕಾಯ್ದೆ ಏರಿ ಕೊರಚರು ಶಾಸ್ವತವಾಗಿ ಕಳ್ಳತನದ ಆರೋಪ ಹೊತ್ತು ತಿರುಗುವಂತೆ ಮಾಡಿದರು. ಈ ಕಳಂಕದಿಂದ ಕೊರಚರು ಊರು ಹೊರಗೆ ಗುಡ್ಡಗಾಡು ಪ್ರದೇಶದಲ್ಲಿ ವಾಸಿಸುವಂತಾಯಿತು. ಅವರಿನ್ನೂ ಮುಖ್ಯವಾಹಿನಿಗೆ ಬರದಿರುವುದಕ್ಕೆ ಇದು ಪ್ರಮುಖ ಕಾರಣ, ಅಲೆಮಾರಿಗಳಲ್ಲಿ ಇಂತಹ ಕಳಂಕ ಬೇರೆ ಯಾರಿಗೂ ಇರಲಾರದು.
ಕೊರಚರು ಇಂದಿಗೂ ಹಗ್ಗ ಕಣ್ಣಿ, ಕಸಪೊರಕೆ ಮಾರಾಟ, ಬುಟ್ಟಿ ಹೆಣೆಯುವುದು, ಹಂದಿ ಸಾಕಾಣೆ ಇತ್ಯಾಧಿ ಹೊಟ್ಟೆ ತುಂಬದ ವೃತ್ತಿಯಲ್ಲಿ ಬದುಕು ಸವೆಸುತ್ತಿದ್ದಾರೆ. ಇಂತಹದೊಂದು ಶೋಷಣೆಗೆ ಒಳಗಾಗಿ ಕಡಿಮೆ ಜನಸಂಖ್ಯೆ ಹೊಂದಿರುವ ಸೂಕ್ಷ್ಮ ಸಮುದಾಯ ಮುಂದುವರೆದಿದೆ ಎಂದು ಹೇಳಲು ನಾರಾಯಣ ಸ್ವಾಮಿಯವರಿಗೆ ಹೇಗೆ ಮನಸ್ಸು ಬಂತು ಗೊತ್ತಿಲ್ಲ. ಇದು ದುರುದ್ದೇಶ ಪೂರಿತ ಆರೋಪ ಮಾಡುವುದನ್ನು ಬಿಟ್ಟು ಛಲವಾದಿ ನಾರಾಯಣ ಸ್ವಾಮಿ ಕೊರಚ, ಕೊರಮ ಹಟ್ಟಿಗೆ ಬಂದು ವಾಸ್ತವ್ಯ ವಾಸ್ತವ ಅರಿಯಬೇಕೆಂದು ಆಗ್ರಹಿಸಿದರು.
ಗೋಷ್ಟಿಯಲ್ಲಿ ರಾಮಣ್ಣ, ಫಕೀರಪ್ಪ ಉಪಸ್ಥಿತರಿದ್ದರು.