ಹೈದರಾಬಾದ್ : ಹೈದರಾಬಾದ್‌ನ ಮಾದಾಪುರ ಜಿಲ್ಲೆಯಲ್ಲಿ ಬೈಕ್ ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸವಾರರು ಮತ್ತು ಪಿಲಿಯನ್ ಸಾವನ್ನಪ್ಪಿದ್ದಾರೆ. ಶುಕ್ರವಾರ ರಾತ್ರಿ ಅಯ್ಯಪ್ಪ ಸೊಸೈಟಿ ಬಳಿಯ 100 ಅಡಿ ರಸ್ತೆಯಲ್ಲಿ ಮದ್ಯದ ಅಮಲಿನಲ್ಲಿ ಸವಾರರು ವೇಗವಾಗಿ ವಾಹನ ಚಲಾಯಿಸುತ್ತಿದ್ದಾಗ ಈ ಘಟನೆ ನಡೆದಿದೆ. ಆ ಪ್ರದೇಶದಲ್ಲಿದ್ದ ಸಿಸಿಟಿವಿಯಲ್ಲಿ ಈ ಮನಕಲಕುವ ದೃಶ್ಯ ಸೆರೆಯಾಗಿದೆ.
ವೇಗವಾಗಿ ಬಂದ ಬೈಕ್ ಡಿವೈಡರ್‌ಗೆ ಢಿಕ್ಕಿ ಹೊಡೆದು ತಕ್ಷಣ ಬೆಂಕಿಗೆ ಆಹುತಿಯಾಗಿರುವ ದೃಶ್ಯಾವಳಿಯಲ್ಲಿದೆ. ಓರ್ವ ಸ್ಥಳದಲ್ಲೇ ಮೃತಪಟ್ಟರೆ, ಮತ್ತೊಬ್ಬ ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾನೆ.
ಬಲಿಯಾದವರನ್ನು ರಘು ಬಾಬು ಮತ್ತು ಆಕಾಂಶ್ ಎಂದು ಗುರುತಿಸಲಾಗಿದೆ. ಇಬ್ಬರೂ ಸಾಫ್ಟ್‌ವೇರ್ ಇಂಜಿನಿಯರ್‌ಗಳು ಇವರಿಬ್ಬರು ಬೋರಬಂಡಾ ಜಿಲ್ಲೆಯ ನಿವಾಸಿಗಳಾಗಿದ್ದಾರೆ. ಪೊಲೀಸರು ಘಟನೆಯ ಕುರಿತು ತನಿಖೆ ಆರಂಭಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.