ರಾಮನಗರ: ಕನಕಪುರ ತಾಲೂಕಿನ ಅಚ್ಚಲು ಗ್ರಾಮದ ಇಂದಿರಾನಗರದಲ್ಲಿ ಜಮೀನಿಗೆ ತೆರಳುತ್ತಿದ್ದ ಅಕ್ಕ-ತಂಗಿಯರ ಮೇಲೆ ಕಾಡಾನೆ ದಾಳಿ ನಡೆಸಿದ ಪರಿಣಾಮ ಅಕ್ಕ ಸ್ಥಳದಲ್ಲೇ ಮೃತಪಟ್ಟು, ತಂಗಿ ಗಂಭೀರ ಗಾಯಗೊಂಡ ಘಟನೆ ನಡೆದಿದೆ.
ಜಯಮ್ಮ (50) ಮೃತ ಮಹಿಳೆಯಾಗಿದ್ದು, ವೆಂಕಲಕ್ಷ್ಮಮ್ಮಗೆ (45) ಗಂಭೀರ ಗಾಯಗೊಂದಿದ್ದಾರೆ.
https://bcsuddi.com/%e0%b2%95%e0%b3%86%e0%b2%a8%e0%b2%a1%e0%b2%be-%e0%b2%97%e0%b3%81%e0%b2%82%e0%b2%a1%e0%b3%87%e0%b2%9f%e0%b2%bf%e0%b2%97%e0%b3%86-%e0%b2%ac%e0%b2%b2%e0%b2%bf%e0%b2%af%e0%b2%be%e0%b2%a6-%e0%b2%89/
ಇನ್ನು ಸಹೋದರಿಯರು ಜಮೀನಿನಲ್ಲಿ ಎಳ್ಳು ಕೊಯ್ಯಲು ಹೋಗುತ್ತಿದ್ದ ಸಂದರ್ಭ ಈ ಘಟನೆ ನಡೆದಿದ್ದು, ಗಾಯಾಳು ವೆಂಕಟಲಕ್ಷ್ಮಮ್ಮ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.