ಭಾರತೀಯ ರಿಸರ್ವ್ ಬ್ಯಾಂಕ್ ಸಿವಿಲ್ ಹಾಗೂ ಇಲೆಕ್ಟ್ರಿಕಲ್ ವಿಭಾಗಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ನೇಮಕಾತಿ ಬ್ಯಾಂಕ್:
ಭಾರತೀಯ ರಿಸರ್ವ್ ಬ್ಯಾಂಕ್
ಹುದ್ದೆ ಹೆಸರು:
ಜೂನಿಯರ್ ಇಂಜಿನಿಯರ್
ಹುದ್ದೆಗಳ ಸಂಖ್ಯೆ:
22
ವೇತನ:
33,900 – 80,236
ವಿದ್ಯಾರ್ಹತೆ:
- ಸಿವಿಲ್ ವಿಭಾಗದ ಹುದ್ದೆಗಳಿಗೆ ಕನಿಷ್ಠ ಶೇಕಡ.65 ಅಂಕಗಳೊಂದಿಗೆ ಡಿಪ್ಲೊಮ ಶಿಕ್ಷಣವನ್ನು (ಎಸ್‌ಸಿ/ ಎಸ್‌ಟಿ / ಪಿಡಬ್ಲ್ಯೂಡಿ ಆಗಿದ್ದಲ್ಲಿ ಶೇಕಡ.55 ಅಂಕಗಳೊಂದಿಗೆ) ಪಡೆದಿರಬೇಕು.
- ಅಥವಾ ಕನಿಷ್ಠ ಶೇಕಡ.55 ಅಂಕಗಳೊಂದಿಗೆ ಡಿಗ್ರಿ ಶಿಕ್ಷಣವನ್ನು (ಎಸ್‌ಸಿ/ ಎಸ್‌ಟಿ / ಪಿಡಬ್ಲ್ಯೂಡಿ ಆಗಿದ್ದಲ್ಲಿ ಶೇಕಡ.45 ಅಂಕಗಳೊಂದಿಗೆ) ಪಡೆದಿರಬೇಕು.
- ಇಲೆಕ್ಟ್ರಿಕಲ್ ವಿಭಾಗದ ಹುದ್ದೆಗಳಿಗೆ ಕನಿಷ್ಠ ಶೇಕಡ.65 ಅಂಕಗಳೊಂದಿಗೆ ಡಿಪ್ಲೊಮ ಶಿಕ್ಷಣವನ್ನು (ಎಸ್‌ಸಿ/ ಎಸ್‌ಟಿ / ಪಿಡಬ್ಲ್ಯೂಡಿ ಆಗಿದ್ದಲ್ಲಿ ಶೇಕಡ.45 ಅಂಕಗಳೊಂದಿಗೆ) ಪಡೆದಿರಬೇಕು.
- ಅಥವಾ ಕನಿಷ್ಠ ಶೇಕಡ.55 ಅಂಕಗಳೊಂದಿಗೆ ಡಿಗ್ರಿ ಶಿಕ್ಷಣವನ್ನು (ಎಸ್‌ಸಿ/ ಎಸ್‌ಟಿ / ಪಿಡಬ್ಲ್ಯೂಡಿ ಆಗಿದ್ದಲ್ಲಿ ಶೇಕಡ.45 ಅಂಕಗಳೊಂದಿಗೆ) ಪಡೆದಿರಬೇಕು.
ವಯೋಮಿತಿ:
- ಭಾರತೀಯ ರಿಸರ್ವ್ ಬ್ಯಾಂಕ್ ಜೂನಿಯರ್ ಇಂಜಿನಿಯರ್ ಹುದ್ದೆಗಳಿಗೆ ದಿನಾಂಕ 01-12-2024 ಕ್ಕೆ ಕನಿಷ್ಠ 20 ವರ್ಷ ಆಗಿರಬೇಕು.
- ಗರಿಷ್ಠ 30 ವರ್ಷ ವಯಸ್ಸು ಮೀರಿರಬಾರದು.
- ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ವಯಸ್ಸಿನ ಸಡಿಲಿಕೆ ನಿಯಮ ಅನ್ವಯವಾಗಲಿದೆ.
ಅರ್ಜಿ ಸಲ್ಲಿಕೆ ಹೇಗೆ?;
ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು https://ibpsonline.ibps.in/rbijenov24/ ಈ ವೆಬ್ ಸೈಟ್ ಗೆ ಭೇಟಿ ನೀಡಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿ ಶುಲ್ಕ:
- ಒಬಿಸಿ, ಸಾಮಾನ್ಯ, ಆರ್ಥಿಕವಾಗಿ ಹಿಂದುಳಿದ ಕೆಟಗರಿ ಅಭ್ಯರ್ಥಿಗಳಿಗೆ ರೂ.450
- ಇತರೆ ಕೆಟಗರಿಯವರಿಗೆ ಇಂಟಿಮೇಶನ್ ಶುಲ್ಕ ರೂ.50
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ:
30-12-2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:
20-01-2025