ಬೆಂಗಳೂರು: ಸ್ಯಾಂಡಲ್ವುಡ್ ನಟ ರಾಕಿಂಗ್ ಸ್ಟಾರ್ ಯಶ್ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಬರ್ತ್ಡೇ ಪ್ರಯುಕ್ತ ಫ್ಯಾನ್ಸ್ಗೆ ‘ಟಾಕ್ಸಿಕ್’ ಚಿತ್ರತಂಡ ಬಿಗ್ ಸರ್ಪ್ರೈಸ್ ನೀಡಿದೆ.
ಯಶ್ ಅವರ ಹುಟ್ಟುಹಬ್ಬದಂದು ವಿಶೇಷ ಉಡುಗೊರೆ ನೀಡೋದಾಗಿ ‘ಟಾಕ್ಸಿಕ್’ ಟೀಮ್ ಈ ಮೊದಲೇ ಘೋಷಣೆ ಮಾಡಿತ್ತು. ಅದರಂತೆ ಇಂದು ಬೆಳಗ್ಗೆ ‘ಟಾಕ್ಸಿಕ್’ನಲ್ಲಿ ಗ್ಯಾಂಗ್ಸ್ಟರ್ ಅವತಾರದಲ್ಲಿರುವ ಯಶ್ ಲುಕ್ ಅನ್ನು ರಿವೀಲ್ ಮಾಡಲಾಗಿದೆ.
ರಿಲೀಸ್ ಆದ 59 ಸೆಕೆಂಡ್ನ ‘ಟಾಕ್ಸಿಕ್’ ಗ್ಲಿಂಪ್ಸ್ನಲ್ಲಿ ಕಲರ್ಫುಲ್ ಸೆಟ್ನಲ್ಲಿ ಯಶ್ ಅವರ ಸ್ಟೈಲೀಶ್ ವಾಕ್, ಹಾಟ್ ಮ್ಯಾನರಿಸಮ್ಗೆ ಫ್ಯಾನ್ಸ್ ಫುಲ್ ಫಿದಾ ಆಗಿದ್ದಾರೆ. ‘ಟಾಕ್ಸಿಕ್’ ಡ್ರಗ್ಸ್ ಮಾಫಿಯಾ ಕುರಿತ ಸಿನಿಮಾವಾಗಿದ್ದು, ಇದೀಗ ರಿಲೀಸ್ ಆದ ಗ್ಲಿಂಪ್ಸ್ ಮೂಲಕ ಚಿತ್ರದ ಮೇಲಿರುವ ನಿರೀಕ್ಷೆ ಇದೀಗ ದ್ವಿಗುಣವಾಗಿದೆ.
ಇನ್ನೂ ‘ಟಾಕ್ಸಿಕ್’ ಸಿನಿಮಾವು ಬೆಂಗಳೂರಿನ ಹೆಚ್ಎಂಟಿ ಮೈದಾನದಲ್ಲಿ ಮೊದಲ ಹಂತದ ಚಿತ್ರೀಕರಣ ಪ್ರಾರಂಭವಾದ ಬಳಿಕ ಚಿತ್ರತಂಡ ಮುಂಬೈ, ಗೋವಾ, ಮಂಗಳೂರಿನಲ್ಲಿ ಶೂಟಿಂಗ್ ನಡೆಸಿದೆ. ಈ ವರ್ಷದ ಕೊಲೆಯಲ್ಲಿ ‘ಟಾಕ್ಸಿಕ್’ ತೆರೆಗೆ ಬರಲಿದೆ.
ಈ ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್ಸ್ ಹಾಗೂ ಯಶ್ ನಿರ್ಮಾಣದ ಸಂಸ್ಥೆ ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಜಂಟಿಯಾಗಿ ನಿರ್ಮಾಣ ಮಾಡುತ್ತಿದೆ. ಚಿತ್ರವನ್ನು ಗೀತು ಮೋಹನ್ದಾಸ್ ನಿರ್ದೇಶಿಸುತ್ತಿದ್ದಾರೆ.