ಹರಿಯಾಣ : ಪುಟ್ಟದಲ್ಲಿ ಗ್ರಾಮದಲ್ಲಿ ಬೆಳೆದ ಗೃಹಿಣಿ ತನ್ನ ಕಠಿಣ ಪರಿಶ್ರಮದಿಂದ ಯುಪಿಎಸ್ ಸಿ ಪರೀಕ್ಷೆ ಪಾಸ್ ಮಾಡಿ ಐಎಎಸ್ ಆದ ಪುಷ್ಪಲತಾ ಯಾದವ್ ಕಥೆ ಇಲ್ಲಿದೆ.
ಭಾರತದ ಗ್ರಾಮೀಣ ಭಾಗದ ಬಹುತೇಕ ಮಹಿಳೆಯರು ಮದುವೆ-ಮನೆ, ಮಕ್ಕಳು ಅಂತ ಜೀವನದಲ್ಲಿ ಕಳೆದು ಹೋಗುವುದು ಸರ್ವೇ ಸಾಮಾನ್ಯ. ಆದರೆ ಕೆಲವೇ ಕೆಲವರು ಮಾತ್ರ ವೃತ್ತಿಪರವಾಗಿ ಬೆಳೆಯುತ್ತಾರೆ. ಐಎಎಸ್ ಪುಷ್ಪಲತಾ ಯಾದವ್ ಇದಕ್ಕೆ ಉತ್ತಮ ಉದಾಹರಣೆ ಅಂದರೆ ತಪ್ಪಾಗಲ್ಲ.
ಐಎಎಸ್ ಪುಷ್ಪಲತಾ ಯಾದವ್ ಮೂಲತಃ ಹರಿಯಾಣದ ರೇವಾರಿ ಜಿಲ್ಲೆಯ ಖುಸ್ಬುರಾ ಎಂಬ ಸಣ್ಣ ಹಳ್ಳಿಯ ನಿವಾಸಿ. ಅವರು ತಮ್ಮ ಆರಂಭಿಕ ಅಧ್ಯಯನವನ್ನು ಹಳ್ಳಿಯಲ್ಲೇ ಮಾಡಿದರು. ಇದಾದ ನಂತರ 2016ರಲ್ಲಿ ಬಿ.ಎಸ್ಸಿ. ಇದರ ನಂತರ ಅವರು ಸ್ನಾತಕೋತ್ತರ ಪದವಿ ಮತ್ತು ಎಂಬಿಎ ಕೂಡ ಮಾಡಿದರು.
ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್ ನಲ್ಲಿ ಕೆಲಸ ಪಡೆದ ಎರಡು ವರ್ಷಗಳ ನಂತರ, ಅವರು 2011 ರಲ್ಲಿ ವಿವಾಹವಾದರು. ಹರಿಯಾಣದ ಮನೇಸರ್ ಗೆ ತೆರಳಿದರು. ಮದುವೆಯಾದ ಸುಮಾರು ನಾಲ್ಕು ವರ್ಷಗಳ ನಂತರ, ಅವರು UPSC ಸಿವಿಲ್ ಸರ್ವೀಸಸ್ ಪರೀಕ್ಷೆಗೆ ತಯಾರು ಮಾಡಿದರು.
2015 ರಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್ ಗೆ ರಾಜೀನಾಮೆ ನೀಡಿದರು. ನಾಗರಿಕ ಸೇವಾ ಪರೀಕ್ಷೆಯ ತಯಾರಿಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡರು.ಆದರೆ ಪುಷ್ಪಲತಾ ಅವರಿಗೆ ಪತಿ ಮತ್ತು ಅತ್ತೆ ಅವರಿಗೆ ಸಂಪೂರ್ಣ ಬೆಂಬಲ ನೀಡಿದರು. ತಯಾರಿ ನಡೆಸುತ್ತಿದ್ದಾಗ, ಗಂಡ ಮಗನನ್ನು ನೋಡಿಕೊಳ್ಳುತ್ತಿದ್ದರು. ಪುಷ್ಪಲತಾ ಅವರು ಅಧ್ಯಯನದತ್ತ ಮಾತ್ರ ಗಮನ ಹರಿಸುತ್ತಿದ್ದರು.
ಪುಷ್ಪಲತಾ ಯಾದವ್ ಮೂರನೇ ಪ್ರಯತ್ನದಲ್ಲಿ ಯುಪಿಎಸ್ಸಿಗೆ ಆಯ್ಕೆಯಾದರು. ಎರಡು ಪ್ರಯತ್ನಗಳಲ್ಲಿ ವಿಫಲರಾದರೂ ಅಂತಿಮವಾಗಿ 2017 ರಲ್ಲಿ ಅವರು UPSC ಯಲ್ಲಿ ಆಯ್ಕೆ ಆದರು.ಪುಷ್ಪಲತಾ ಯಾದವ್ ಅವರು 2017 ರಲ್ಲಿ UPSC ಸಿವಿಲ್ ಸರ್ವೀಸಸ್ ಪರೀಕ್ಷೆಯಲ್ಲಿ ಅಖಿಲ ಭಾರತ 80 ನೇ ಶ್ರೇಯಾಂಕದೊಂದಿಗೆ ಐಎಎಸ್ ಅಧಿಕಾರಿಯಾಗಿದ್ದಾರೆ.