ನವದೆಹಲಿ: ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಚೀಲದಲ್ಲಿ ಮೊಸಳೆ ತಲೆಬುರುಡೆಯನ್ನು ಹೊತ್ತೊಯ್ಯುತ್ತಿದ್ದ ಆರೋಪದ ಮೇಲೆ ಕೆನಡಾದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ ಎಂದು ಕಸ್ಟಮ್ಸ್ ಇಲಾಖೆ ಜ. 9 ರಂದು ನಡೆದಿದೆ.
ಸೋಮವಾರ ಮಾಂಟ್ರಿಯಲ್‌ಗೆ ತನ್ನ ವಿಮಾನವನ್ನು ಹತ್ತಲು ತಯಾರಿ ನಡೆಸುತ್ತಿದ್ದ ವೇಳೆ ವಿಮಾನ ನಿಲ್ದಾಣದ ಟರ್ಮಿನಲ್ 3 ನಲ್ಲಿ ಭದ್ರತಾ ತಪಾಸಣೆಯ ಸಮಯದಲ್ಲಿ ಪ್ರಯಾಣಿಕರನ್ನು ತಡೆಹಿಡಿಯಲಾಗಿದೆ ಎಂದು ಇಲಾಖೆ ಹೇಳಿದೆ.
“ಪರಿಶೀಲನೆಯ ನಂತರ, 777 ಗ್ರಾಂ ತೂಕದ ಮೊಸಳೆಯ ಮರಿಯ ದವಡೆಯನ್ನು ಹೋಲುವ ಚೂಪಾದ ಹಲ್ಲುಗಳನ್ನು ಹೊಂದಿರುವ ತಲೆಬುರುಡೆಯನ್ನು ಕೆನೆ ಬಣ್ಣದ ಬಟ್ಟೆಯಲ್ಲಿ ಸುತ್ತಿರುವುದು ಕಂಡುಬಂದಿದೆ” ಎಂದು ಕಸ್ಟಮ್ಸ್ ಇಲಾಖೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಈ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.