ಹೈದರಾಬಾದ್ : ತೆಲುಗು ಸೂಪರ್ ಸ್ಟಾರ್ ಅಲ್ಲು ಅರ್ಜುನ್ ಅವರ ತಂದೆ ಮತ್ತು ನಿರ್ಮಾಪಕ ಅಲ್ಲು ಅರವಿಂದ್ ಶುಕ್ರವಾರ ತಮ್ಮ 76 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ನಟ ಇನ್ಸ್ಟಾಗ್ರಾಮ್ ಸ್ಟೋರೀಯಲ್ಲಿ ಆಚರಣೆಯ ಒಂದು ಚಿತ್ರವನ್ನು ಹಂಚಿಕೊಂಡಿದ್ದಾರೆ.
ಚಿತ್ರದಲ್ಲಿ ಅಲ್ಲು ಅರವಿಂದ್ ಅವರ ಪತ್ನಿ ನಿರ್ಮಲಾ, ಮಗ ಅಲ್ಲು ಅರ್ಜುನ್, ಸೊಸೆ ಸ್ನೇಹಾ ಮತ್ತು ಮೊಮ್ಮಕ್ಕಳಾದ ಅಯಾನ್ ಮತ್ತು ಅರ್ಹಾ ಅವರು ಹುಟ್ಟುಹಬ್ಬದ ಕೇಕ್ ಅನ್ನು ಕತ್ತರಿಸುತ್ತಿದ್ದಾರೆ. ಶೀರ್ಷಿಕೆಯಲ್ಲಿ ಅಲ್ಲು ಅರ್ಜುನ್, “ಹುಟ್ಟುಹಬ್ಬದ ಶುಭಾಶಯಗಳು ಅಪ್ಪ” ಎಂದು ಬರೆದಿದ್ದಾರೆ.
76ನೇ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ತಂದೆಗೆ ‘ಪುಷ್ಪ ಕಾ ಬಾಪ್’ ಎಂದು ಕೇಕ್ ಮೇಲೆ ಬರೆದು ಅಲ್ಲು ಅರ್ಜುನ್ ವಿಶೇಷವಾಗಿ ಶುಭಹಾರೈಸಿದ್ದಾರೆ. ಈ ಕೇಕ್ ಫೋಟೋ ಸಧ್ಯ ಎಲ್ಲೆಡೆ ವೈರಲ್ ಆಗುತ್ತಿದೆ.